ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಬರುವ ಫೆಬ್ರವರಿ 8 ಮತ್ತು 9 ರಂದು ಜರುಗಲಿರುವ 7ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಇಂದಿನಿಂದ ರಾಜ್ಯದಲ್ಲಿ 2ನೇ ಹಂತದ ಪ್ರವಾಸ ಕೈಗೊಂಡಿದ್ದಾರೆ.
ಇಂದಿನಿಂದ ಡಿಸೆಂಬರ್ 31 ರವರೆಗೆ ಕೈಗೊಂಡಿರುವ 2ನೇ ಹಂತದ ಪ್ರವಾಸದಲ್ಲಿ ಶ್ರೀಗಳು, ಇಂದು ಬೆಳಿಗ್ಗೆ 9 ಗಂಟೆಗೆ ರಾಣೇಬೆನ್ನೂರು, 12 ಗಂಟೆಗೆ ಬ್ಯಾಡಗಿ, ಮಧ್ಯಾಹ್ನ 2ಕ್ಕೆ ಹಾವೇರಿ, ಸಂಜೆ 4 ಕ್ಕೆ ಶಿಗ್ಗಾವಿ, ದಿನಾಂಕ 17ರ ಮಂಗಳವಾರ ಬೆಳಿಗ್ಗೆ 9ಕ್ಕೆ ಸವಣೂರು, ಮಧ್ಯಾಹ್ನ 12ಕ್ಕೆ ಲಕ್ಷ್ಮೀಶ್ವರ, ಮಧ್ಯಾಹ್ನ 2ಕ್ಕೆ ಶಿರಹಟ್ಟಿ, ಸಂಜೆ 4ಕ್ಕೆ ಗದಗ, ದಿನಾಂಕ 18ರ ಬುಧವಾರ ಬೆಳಿಗ್ಗೆ 9ಕ್ಕೆ ರೋಣ, ಮಧ್ಯಾಹ್ನ 1ಕ್ಕೆ ಬಾದಾಮಿ, ಸಂಜೆ 4ಕ್ಕೆ ಗುಳೇದಗುಡ್ಡ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ.