ಚಿತ್ರದುರ್ಗ ಮೆದೆಹಳ್ಳಿ ರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಇದೇ ದಿನಾಂಕ 21 ರವರೆಗೆ 25 ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ ಜರುಗಲಿದೆ.
ಕೇರಳದ ಪ್ರಧಾನ ಅರ್ಚಕರಾದ ವಿಷ್ಣು ಭಟ್ಟಾದಿ ಪಾಡ ತಂತ್ರಿಗಳು, ತ್ರಿಶೂರ್ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಸತೀಶ ಶರ್ಮ ಸಂಗಡಿಗರಿಂದ ಪೂಜೆ ನೆರವೇರಲಿದೆ.
ಪ್ರತಿ ದಿನ ಮಹಾ ಗಣಪತಿ ಹೋಮ, ಸುದರ್ಶನ ಹೋಮ, ಅಭಿಷೇಕ, ಉಷಾಂ ಪೂಜೆ, ನವಕಂ, ಪಂಚಗವ್ಯಂ, ಕಳಸ ಪೂಜೆ, ಹುಚ್ಚ ಪೂಜೆ,ಅಂಕುರಾ ಪೂಜೆ, ಮೊಳೆಪೂಜೆ, ದೀಪಾರಾಧನೆ, ಶ್ರೀ ಭೂತ ಬಲಿ, ಭಗವತಿ ಸೇವಾ, ಹತ್ತಾಳ ಪೂಜೆ, ಚತುಶುದ್ಧಿ, ದಾರ, ಪಂಚಗವ್ಯ, ಧ್ವಜಸ್ತಂಬ,ದಿನಾಂಕ 18 ರಂದು ಬುಧವಾರ ಸಂಜೆ 18 ಮೆಟ್ಟಿಲುಗಳ ಪಡಿ ಪೂಜಾ ಕಾರ್ಯಕ್ರಮ ನಡೆಯಲಿದೆ.