ದಾವಣಗೆರೆ, ಡಿ.15- ಸ್ವದೇಶಿ ಜಾಗರಣ ಮಂಚ್ ವತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಪ್ರತಿನಿತ್ಯ ಭೇಟಿ ನೀಡುವ ಮಹಿಳೆಯರಿಗೆ ಸೌಭಾಗ್ಯವತಿ ಉಡುಗೊರೆ ನೀಡಲಾಗುತ್ತಿದೆ.
ಭಾರತೀಯ ಪಾರಂಪರಿಕ ಉಡುಗೆಯಾದ ಸೀರೆಯುಟ್ಟು ಬರುವ ಮಹಿಳೆಯರಿಗೆ ಲಕ್ಕಿ ಡಿಪ್ ಮುಖಾಂತರ ಸೀರೆಯನ್ನು ಬಿ.ಎಸ್. ಚನ್ನಬಸಪ್ಪ ಅಂಡ್ಸ್ ಸನ್ಸ್ ಇವರು ಉಡುಗೊರೆಯಾಗಿ ನೀಡುತ್ತಾರೆ.
ಲಕ್ಕಿ ಡಿಫ್‌ನಲ್ಲಿ ಎಲೆಬೇತೂರು ಗ್ರಾಮದ ಶ್ರೀಮತಿ ಸುಮಾ ಮಾಳಿಗೇರ ಬಸವಂತಪ್ಪ ಇವರು ಪಡೆದುಕೊಂಡಿರುತ್ತಾರೆ. ಲಕ್ಕಿ ಡಿಪ್ ಸೌಭಾಗ್ಯವತಿ ಉಡುಗೊರೆ ಸೀರೆಯ ಕೂಪನ್ನನ್ನು ಸ್ವದೇಶಿ ಮೇಳದ ಸಂಘಟಕರಾದ ಎಸ್.ಟಿ. ವೀರೇಶ್ ದಂಪತಿಗಳಿಗೆ ನೀಡಿದ್ದಾರೆ.