ಕೊಟ್ಟೂರು, ಡಿ.13- ಬೆಳಗಾವಿಯಲ್ಲಿ ಮೀಸಲಾತಿ ಬೇಡಿಕೆಗಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಪಂಚಮಸಾಲಿ ಸಮಾಜದ ಬಾಂಧವರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ ಹಾಗೂ ದೌರ್ಜನ್ಯ ನಡೆಸಿದ ಸರ್ಕಾರದ ನಡೆ ಖಂಡಿಸಿ,
ಕೊಟ್ಟೂರಿನ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಬಂಧುಗಳು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇಲ್ಲಿನ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಯಲ್ಲಿ ಪಂಚಮಸಾಲಿ ಬಂಧುಗಳು ಸೇರಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಹಾಕಿದರು.
ಸಮಾಜದ ಮುಖಂಡ ಶೆಟ್ಟಿ ತಿಂದಪ್ಪ ಮಾತನಾಡಿ, ಸಮಾಜವನ್ನು ಕಡೆಗಣಿಸಿ ಮೀಸಲಾತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರು ಶಾಸಕರ ಆಯ್ಕೆಯಲ್ಲಿ ಕಠಿಣ ನಿಲುವು ತೆಗೆದುಕೊಳ್ಳಲಾಗುತ್ತದೆ ಎಂದರು.
ಸಮಾಜದ ಮುಖಂಡ ಪಂಪಾಪತಿ ಮಾತ ನಾಡಿ, ಸಿದ್ದರಾಮಯ್ಯ ಸರ್ಕಾರ ನಿಜಾಮರ ಆಡಳಿತ ನಡೆಸುತ್ತಿದ್ದು, ಪಂಚಮಸಾಲಿ ಸಮಾಜದವರು ಅಂಜುಬುರುಕರಲ್ಲ, ಮುಂದಿನ ದಿನಗಳಲ್ಲಿ ಮೀಸಲಾತಿ ನೀಡದಿದ್ದಲ್ಲಿ ಬೆಂಗಳೂರಿನ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಹಸೀಲ್ದಾರ್ ಅಮರೇಶ್ ಸಮಾಜ ಬಾಂಧವರಿಂದ ದೂರು ಸ್ವೀಕರಿಸಿದರು.
ಸಮಾಜದ ಎಂ ಶಿವಣ್ಣ, ಭರ್ಮನಗೌಡ, ಚಪ್ಪರದಹಳ್ಳಿ ಕರಡಿ ಕೊಟ್ರೇಶ, ಚಿರಬಿ ಪ್ರಕಾಶ್, ಎಸ್. ಅಶೋಕ್, ಕೆ.ಬಿ. ಮಲ್ಲಿಕಾರ್ಜುನ, ಎನ್. ಬಸವರಾಜ್, ರಾಂಪುರ ವಿವೇಕಾನಂದ, ಬಿ. ಕೊಟ್ರಪ್ಪ, ಶಿವಪ್ರಕಾಶ್, ವೀವೇಕಾನಂದ ಗೌಡ, ಶಿವಕುಮಾರ ಗೌಡ, ಕೆ.ಎಸ್. ನಾಗರಾಜ್ ಗೌಡ, ಮುಕೇಶ್ ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.