ಸ್ವದೇಶಿ ಜಾಗರಣ ಮಂಚ್ ಕರ್ನಾಟಕದ ವತಿಯಿಂದ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಸ್ವದೇಶಿ ಮೇಳದಲ್ಲಿ ಇಂದು ಸಂಜೆ 5 ರಿಂದ 9 ರವರೆಗೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.
ದಾವಣಗೆರೆ ಗಾನಸೌರಭ ಸಂಗೀತ ವಿದ್ಯಾಲಯದ ವಿದುಷಿ ಶುಭದ ಮತ್ತು ತಂಡದವರಿಂದ ವೀಣಾವಾದನ, ಡಾ. ಲಕ್ಷ್ಮೀ ನಾರಾಯಣ್ ಅವರಿಂದ ಶಿಳ್ಳೆ ಸಂಗೀತ, ದಾವಣಗೆರೆ ಬೆಳಕು ಜಾನಪದ ಕಲಾ ತಂಡದ ರುದ್ರಾಕ್ಷಿಬಾಯಿ, ನವ್ಯ, ಪ್ರಿಯಾಂಕ, ಪುದಾಯಿನಿ, ಪ್ರಾಸ್ತಾಯಿನಿ ಇವರಿಂದ ಲಂಬಾಣಿ ನೃತ್ಯ ಪ್ರದರ್ಶನ, ಸಂಜೆ 6 ಗಂಟೆಗೆ ಉಡುಪಿ ಸರಸ್ವತಿ ಜಾನಪದ ಕಲಾಮೇಳದಿಂದ ಜಾನಪದ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.