15, 16ರಂದು ಕೋಡಿ ಕ್ಯಾಂಪ್‌ ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕ ದೀಪೋತ್ಸವ

ದಾವಣಗೆರೆ, ಡಿ. 12 – ಕೊಟ್ಟೂರು ಶ್ರೀ ಗುರುಬಸವ ರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ ಇವರಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್‌ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಇದೇ ದಿನಾಂಕ 15 ರ ಭಾನುವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದೆ.

ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಅಭಿಷೇಕ, ಪೂಜೆ. ನಂತರ ಬೆಳಗ್ಗೆ 8 ರಿಂದ ಮಧ್ಯಾಹ್ನದವರೆಗೆ ಪ್ರಸಾದ-ದಾಸೋಹ ಸೇವೆ ನಡೆಯಲಿದೆ. ಶ್ರೀ ಸೋಮನಹಳ್ಳಿ ನಿಜಗುಣ ಶಿವಯೋಗಪ್ಪ ಮತ್ತು ಸಹೋದರರು, ಕುಟುಂಬದವರು ಸಂಜೆ 5.30ಕ್ಕೆ ಕಾರ್ತಿಕ ದೀಪೋತ್ಸವ ನಡೆಸಲಿದ್ದಾರೆ.

ದಿನಾಂಕ 16 ರ ಸೋಮವಾರ ಬೆಳಗ್ಗೆ ಅಭಿಷೇಕ, ಪೂಜೆ, ಸಂಜೆ 5ಕ್ಕೆ ಕಡೇ ಕಾರ್ತಿಕ ದೀಪೋತ್ಸವ ಏರ್ಪಾಡಾಗಿದೆ.

ದೇಣಿಗೆ : ದಾಸೋಹ ಮನೆ – ಸಭಾಂಗಣ ಕಟ್ಟಡ ಪ್ರಗತಿ ಹಂತದಲ್ಲಿದೆ. ಆದ್ದರಿಂದ ಈ ಸತ್ಕಾರ್ಯಕ್ಕೆ ದೇಣಿಗೆ ಸಲ್ಲಿಸುವ ಸದ್ಭಕ್ತರು ದೇವಸ್ಥಾನ ಸಮಿತಿಯ ಕಣಕುಪ್ಪಿ ಮುರುಗೇಶಪ್ಪ – 96118 89151, ಟಿ.ಜಿ. ಬಕ್ಕೇಶಪ್ಪ – 91089 88898, ಮಲ್ಲಾಬಾದಿ ಗುರುಬಸವರಾಜ್‌ – 79757 97079 ಇವರುಗಳಿಗೆ ಭೇಟಿ ಮಾಡಿ ದೇಣಿಗೆ ಸಲ್ಲಿಸಲು ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ ಕೋರಿದೆ.

error: Content is protected !!