ಕಲಾಕುಂಚದಿಂದ `ಸಂಕ್ರಾಂತಿ ಕಾವ್ಯ ಸಂಭ್ರಮ’ ಸ್ಪರ್ಧೆ

ದಾವಣಗೆರೆ, ಡಿ. 12-ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸಂಕ್ರಾಂತಿ ಪ್ರಯುಕ್ತ ರಾಜ್ಯ ಮಟ್ಟದ `ಸಂಕ್ರಾಂತಿ ಕಾವ್ಯ ಸಂಭ್ರಮ’ ಉಚಿತ ಕವನ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತೀರ್ಪುಗಾರ ರಲ್ಲಿ ಒಬ್ಬರಾದ ಕವಯತ್ರಿ, ಸಾಹಿತಿ ಶ್ರೀಮತಿ ಅನ್ನಪೂರ್ಣ ಪಾಟೀಲ್ ತಿಳಿಸಿದ್ದಾರೆ. ಸಂಕ್ರಾಂತಿ ಕುರಿತಂತೆ 15 ರಿಂದ 20 ಸಾಲುಗಳ ಕವನ ಬರೆದು ಇದೇ ದಿನಾಂಕ 31ರೊಳಗೆ  ಕನ್ನಡದಲ್ಲಿ ತಮ್ಮ ವಿಳಾಸ ವ್ಯಾಟ್ಸ್ಯಾಪ್ ಸಂಖ್ಯೆಯೊಂದಿಗೆ 9481909864 ಈ ಸಂಖ್ಯೆಗೆ ಕಳುಹಿಸಬೇಕು ಎಂದು ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

error: Content is protected !!