ಹರಿಹರೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್

ಹರಿಹರೇಶ್ವರ ಅರ್ಬನ್ ಬ್ಯಾಂಕ್   ಅಧ್ಯಕ್ಷರಾಗಿ ಮಲ್ಲಿಕಾರ್ಜುನ್

ಹರಿಹರ, ಡಿ.11- ನಗರದ ಹರಿಹರೇಶ್ವರ ಅರ್ಬನ್ ಕೋ-ಆಪ್‌ ಬ್ಯಾಂಕ್  ಅಧ್ಯಕ್ಷರಾಗಿ ಜಿ.ಕೆ. ಮಲ್ಲಿಕಾರ್ಜುನ್ ಹಾಗೂ ಉಪಾಧ್ಯಕ್ಷರಾಗಿ ನಾಗೇಂದ್ರಸಾ ಕಾಟ್ವೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಅಧ್ಯಕ್ಷ ರವೀಂದ್ರ ಕೆ.  ಮತ್ತು ಉಪಾಧ್ಯಕ್ಷ ಹಾಲೇಶ್ ಬಾವಿಕಟ್ಟಿ ಅವರುಗಳು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿ.ಕೆ. ಮಲ್ಲಿಕಾರ್ಜುನ್ ಮತ್ತು  ಉಪಾಧ್ಯಕ್ಷರಾಗಿ ನಾಗೇಂದ್ರಸಾ ಕಾಟ್ವೆ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾದ ಸಹಕಾರಿ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸುನಿತಾ ಘೋಷಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಬಿ.ಕೆ. ಅನ್ವರ್ ಪಾಷಾ, ಕೆ. ಅಣ್ಣಪ್ಪ, ಪರಶುರಾಮ್ ಅಂಬೇಕರ್, ವಿದ್ಯಾ ಆರ್. ಮೆಹರ್ವಾಡೆ, ಜಿ. ವಿ. ಪ್ರವೀಣ್ ಕುಮಾರ್, ಹೆಚ್.ಆರ್. ವೀಣಾ, ಬಿ. ಆರ್. ಈಶ್ವರ್,  ಸಿಬ್ಬಂದಿಗಳಾದ ರೇಖಾ ಮೆಹರ್ವಾಡೆ, ಸಿ. ಪ್ರಕಾಶ್, ಶಶಿಕಲಾ ಪರಶುರಾಮ್, ಸತ್ಯನಾರಾಯಣ ರಾವ್, ಸಿ. ಪ್ರಶಾಂತ್, ಎ. ಶಿವಕುಮಾರ್, ಬಿಂದು ಇತರರು ಹಾಜರಿದ್ದರು.

error: Content is protected !!