ದಾವಣಗೆರೆ, ಡಿ.11- ಜಿಲ್ಲಾ ಮಹಿಳಾ ಗಾಣಿಗರ ಸಮಾಜದ ವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ನಿನ್ನೆ ಬನ್ನಿ ಮಹಾಂಕಾಳಿ ದೇವಿ ಕಾರ್ತಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ದಿನಾಂಕ 3 ರಂದು ವಿಶೇಷ ಚೇತನ ದಿನಾಚರಣೆ ಪ್ರಯುಕ್ತ ಸುಮಾರು 70 ವಿಶೇಷ ಚೇತನ ಮಕ್ಕಳಿಗೆ ನೃತ್ಯ ಹಾಗೂ ಏಕಪಾತ್ರ ಅಭಿನಯವನ್ನು ಏರ್ಪಡಿಸಿದ್ದೆವು. ಈ ಸಂದರ್ಭದಲ್ಲಿ ಪಿ. ವೆಂಕಟೇಶ್ ಅವರಿಗೆ ಕಾಯಕಯೋಗಿ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ನಂತರ ವಿಶೇಷ ಚೇತನ ಮಕ್ಕಳಿಂದ ಕಾರ್ತಿಕ ದೀಪವನ್ನು ಬೆಳಗಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶ್ರೀಮತಿ ಶೋಭಾ ಪ್ರಭಾಕರ್ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಗಾಣಿಗರ ಸಮಾಜದ ಮಹಿಳೆಯರು ಉಪಸ್ಥಿತರಿದ್ದರು.
January 21, 2025