ವೀರ ರುದ್ರಮುನಿ ಶ್ರೀ ಜನ್ಮ ಶತಮಾನೋತ್ಸವ

ವೀರ ರುದ್ರಮುನಿ ಶ್ರೀ ಜನ್ಮ  ಶತಮಾನೋತ್ಸವ

ರಂಭಾಪುರಿ ಪೀಠದಲ್ಲಿ 15 ರಂದು ಕಾರ್ಯಕ್ರಮ

ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು)- ಡಿ. 9 – ಶ್ರೀ ಜಗದ್ಗುರು ರಂಭಾಪುರಿ ವೀರ ಸಿಂಹಾಸನ ಮಹಾಸಂಸ್ಥಾನ ಪೀಠದ 120ನೇ ಜಗದ್ಗುರುಗಳಾಗಿ ಶ್ರೀ ಪೀಠವನ್ನು ಅಲಂಕರಿಸಿದ್ದ ಲಿಂ. ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿ ದೇವ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವವನ್ನು ಇದೇ ದಿನಾಂಕ 15  ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಚರಿಸಲಾಗುವುದು. 

ಶ್ರೀ ಜಗದ್ಗುರು ರಂಭಾಪುರಿ ಪೀಠದ ಶ್ರೀ ರುದ್ರಮುನೀಶ್ವರ ಸಮುದಾಯ ಭವನದಲ್ಲಿ ಜರುಗುವ ಸಮಾರಂಭದ ಸಾನ್ನಿಧ್ಯವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹಾಗೂ ಶ್ರೀ ಕೇದಾರ ಭೀಮಾ ಶಂಕರಲಿಂಗ ಜಗದ್ಗುರುಗಳು ವಹಿಸುವರು. ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. 

‘ಧರ್ಮ ಚೇತನ’ ಕೃತಿಯನ್ನು ಮಾಜಿ ಸಂಸದ ಗೌಡ ಗಾಂವ ಹಿರೇಮಠದ ಡಾ.ಜಯಸಿದ್ಧೇಶ್ವರ ಶಿವಾಚಾರ್ಯರು, ‘ಬಾಳ ಹೊಂಗಿರಣ’ ಕೃತಿ ಯನ್ನು ಮುಕ್ತಿ ಮಂದಿರ ಕ್ಷೇತ್ರದ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಹಾಗೂ ‘ರಂಭಾಪುರಿ ಬೆಳಗು’ ವಿಶೇಷಾಂಕವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್‌ ಬಿಡುಗಡೆಗೊಳಿಸುವರು. 

ಸಿಯುಪಿಎ ಮತ್ತು ಪಿಇಟಿಎ ಇಂಡಿಯಾ ಇವರು ದಾನ ನೀಡಿದ ಯಾಂತ್ರಿಕ ಆನೆಯ ಸಮರ್ಪಣೆ ಈ ಸಂದರ್ಭದಲ್ಲಿ ನಡೆಯುತ್ತದೆ.
ಈ ಯಾಂತ್ರಿಕ ಆನೆಯು ನಿಜವಾದ ಆನೆಗಳು ತಮ್ಮ ಕಾಡಿನ ಮನೆಗಳಲ್ಲಿ ಉಳಿಯಲು ಸಹಾಯ ಮಾಡುವ ಹಾಗೂ ಧಾರ್ಮಿಕ ವಿಧಿಗಳನ್ನು ಸಹಾನು ಭೂತಿಯಿಂದ ನಡೆಸುವ ಶ್ರೀ ಪೀಠದ ಬದ್ಧತೆಯನ್ನು ಗೌರವಿಸುತ್ತದೆ.

ಮುಖ್ಯ ಅತಿಥಿಗಳಾಗಿ ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಸಚಿವ ಡಿ.ಎನ್‌.ಜೀವರಾಜ್, ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯು.ಎಂ. ಬಸವರಾಜ್ ಭಾಗವಹಿಸುವರು. ಅ.ಭಾ.ವೀ. ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸುವರು. ಬಂಕಾಪುರ ಅರಳೆಲೆ ಹಿರೇಮಠ ರೇವಣಸಿದ್ಧೇಶ್ವರ ಶಿವಾ ಚಾರ್ಯ ಶ್ರೀಗಳು ನುಡಿನಮನ ಸಲ್ಲಿಸುವರು.

ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿ ಕಾರಿ ಸಿ.ಎಚ್. ಬಾಳನಗೌಡ್ರ ಇವರಿಗೆ ಜನ್ಮ ಅಮೃತ ಮಹೋತ್ಸವ ನಿಮಿತ್ಯ ಗೌರವ ಗುರು ರಕ್ಷೆ ನಡೆಯಲಿದೆ. 

ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಶಿವಮೊಗ್ಗ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಸಂಸ್ಥಾಪಕ ವಿಘ್ನೇಶ್ವರಯ್ಯ ಸೋಲಾಪುರ-ಶ್ರೀಮತಿ ಇಂದಿರಾ, ಕೂಡ್ಲಿಗೆರೆಯ ಜಲಜಾಕ್ಷಮ್ಮ ಮತ್ತು ಮಕ್ಕಳು, ಸವಣೂರಿನ ಡಾ. ಗುರುಪಾದಯ್ಯ ವೀ. ಸಾಲಿಮಠ ಇವರಿಗೆ ವಿಶೇಷ ಗುರುರಕ್ಷೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಅನುಗ್ರಹಿಸುವರು. 

error: Content is protected !!