ದಾವಣಗೆರೆ, ಡಿ.8- ಇಲ್ಲಿನ ಗಾಂಧಿನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಬೆಳಗ್ಗೆ ಡಿಸೆಂಬರ್ 15ರಂದು ನಡೆಯುವ ಜಿಲ್ಲಾ ಮಾದಿಗ ಮತ್ತು ಛಲವಾದಿ ಸಮಾಜದ ಸಮಾವೇಶ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.
ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹಮ್ಮಿಕೊಂಡ ಸಮಾವೇಶ ಹಾಗೂ ಗುರು ರಾಮದಾಸ ಸ್ವಾಮಿ ಅಧ್ಯಾತ್ಮಿಕ ಸೇವಾ ಟ್ರಸ್ಟ್ ವತಿಯಿಂದ ಜರುಗುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಸಮಾಜದ ಮುಖಂಡರು ಚರ್ಚೆ ನಡೆಸಿ, ಹಲವು ತೀರ್ಮಾನ ಕೈಗೊಂಡರು ಎಂದು ಸಂಘದ ಅಧ್ಯಕ್ಷ ಬಿ.ಹೆಚ್ ವೀರಭದ್ರಪ್ಪ ಸಭೆಯಲ್ಲಿ ತಿಳಿಸಿದರು.
ಈ ವೇಳೆ ಸಮಾಜದ ಹಿರಿಯ ಮುಖಂಡ ನಿವೃತ್ತ ಎಸ್ಪಿ ರವಿ ನಾರಾಯಣ್, ಪೌರಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಎಲ್.ಎಂ. ಹನುಮಂತಪ್ಪ, ಹಿರಿಯ ಪತ್ರಕರ್ತ ಏಕಾಂತಪ್ಪ, ಮಾಜಿ ನಗರ ಸಭೆ ಸದಸ್ಯ ದೋಣಿ ನಿಂಗಪ್ಪ, ಪಾಲಿಕೆ ಸದಸ್ಯ ಎಲ್.ಡಿ ಗೋಣೆಪ್ಪ, ಎಸ್, ಮಲ್ಲಿಕಾರ್ಜುನ್, ಹನುಮಂತಪ್ಪ, ಗುಡಪ್ಪ, ಕುಂದುವಾಡ ಮಂಜುನಾಥ್, ಎಂ. ಗುರುಮೂರ್ತಿ, ಎಲ್.ಹೆಚ್. ಸಾಗರ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.