ಸಂವಿಧಾನದ ಬಗ್ಗೆ ಹೆಚ್ಚು ಜಾಗೃತಿ ಅಗತ್ಯ

ಸಂವಿಧಾನದ ಬಗ್ಗೆ ಹೆಚ್ಚು ಜಾಗೃತಿ ಅಗತ್ಯ

ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು

ದಾವಣಗೆರೆ, ಡಿ. 6- ಸಂವಿಧಾನ ಶಿಲ್ಪಿ, ಭಾರತ ರತ್ನ ಅಂಬೇಡ್ಕರ್ ರವರ ಆಶಯಗಳಿಗೆ ಮತ್ತು ಸಂವಿಧಾನಕ್ಕೆ ಅಡ್ಡಿಪಡಿಸುವ ಯತ್ನವನ್ನು ಸಂಘ ಪರಿವಾರದ ಜನ ನಿರಂತರವಾಗಿ ಮಾಡುತ್ತಿದ್ದಾರೆ, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅಂಬೇಡ್ಕರ್‌ರವರ ಜನಪರ ಆಶಯಗಳು ಮತ್ತು ಭಾರತದಂತಹ ಪ್ರಜಾಪ್ರಭುತ್ವ ದೊಡ್ಡ ದೇಶಕ್ಕೆ ನೀಡಿದ ಸಮಾನತೆಯ ಸಂವಿಧಾನದ ಬಗ್ಗೆ ಹೆಚ್ಚು ಹೆಚ್ಚಾಗಿ ಜನರ ಮಧ್ಯೆ ಪ್ರಚಾರ ಮಾಡಬೇಕಾಗಿದೆ ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಾವುಗಳು ಮಾಡಬೇಕಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ಹೇಳಿದರು.

ಇಲ್ಲಿನ ಕಾಂ. ಪಂಪಾಪತಿ ಭವನದಲ್ಲಿ ಇಂದು ಏರ್ಪಾಡಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. 

ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಹೆಚ್. ಜಿ. ಉಮೇಶ್ ಮಾತನಾಡಿ ಅಂಬೇಡ್ಕರ್ ಕುರಿತು, ಅವರ ಆಶಯಗಳ ಕುರಿತು ನಾವುಗಳು ಅವರ ವಿಚಾರಗಳನ್ನು ಹೆಚ್ಚು ಪ್ರಚಾರ ಮಾಡುವುದರ ಮೂಲಕ ಜನ ಜಾಗೃತಿ ಗೊಳಿಸಬೇಕಾಗಿದೆ ಎಂದರು.

ಜಿ.ಯಲ್ಲಪ್ಪ,ಮಹಮ್ಮದ್ ಬಾಷಾ ಜಗಳೂರು, ಟಿ. ಹೆಚ್. ನಾಗರಾಜ್ ಹರಿಹರ, ಮಹಮ್ಮದ್ ರಫೀಕ್ ಚನ್ನಗಿರಿ, ನಿಟ್ಟುವಳ್ಳಿ ಬಸವರಾಜ್, ಸರೋಜ, ಐರಣಿ ಚಂದ್ರು, ಕೆ.ಜಿ. ಶಿವಮೂರ್ತಿ, ಯರಗುಂಟೆ ಸುರೇಶ್, ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!