ನೀಲಗುಂದ ಸಹಕಾರ ಸಂಘದ ಚುನಾವಣೆ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ನೀಲಗುಂದ ಸಹಕಾರ ಸಂಘದ ಚುನಾವಣೆ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಹರಪ ನಹಳ್ಳಿ, ಡಿ. 6 – ತಾಲ್ಲೂಕಿನ ನೀಲಗುಂದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಡಿ.15 ರಂದು ನಡೆಯುವ ಚುನಾವಣೆಗೆ ಅರೇಮಜ್ಜಿಗೇರಿ ಗ್ರಾಮದಿಂದ ಹರಪನಹಳ್ಳಿ ನಾಗಪ್ಪ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಸಾಲಗಾರರ ಕ್ಷೇತ್ರದ ಭಾಗ-1 ರಲ್ಲಿ ಸಾಮಾನ್ಯ ವರ್ಗದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಬಯಸಿ ರಿಟರ್ನಿಂಗ್ ಅಧಿಕಾರಿ ಸೋಮಪ್ಪ ಶಿವಪ್ಪ ಲಮಾಣಿ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

ಅಭ್ಯರ್ಥಿ ಹರಪನಹಳ್ಳಿ ನಾಗಪ್ಪ ಅವರಿಗೆ ವ್ಯಾಸನತಾಂಡಾ ಗ್ರಾಮದ ಎಲ್.ಸೋಮಶೇಖರನಾಯ್ಕ್ ಸೂಚಕರಾಗಿ ಸಹಿ ಹಾಕಿದರು. 

error: Content is protected !!