ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸಿ.ಎಂ. ಹಾಗೂ ಸಚಿವರಿಗೆ ಆಹ್ವಾನ

ಸಾಮೂಹಿಕ ವಿವಾಹ  ಮಹೋತ್ಸವಕ್ಕೆ ಸಿ.ಎಂ. ಹಾಗೂ ಸಚಿವರಿಗೆ ಆಹ್ವಾನ

ದಾವಣಗೆರೆ, ಡಿ.6- ಜಿಲ್ಲಾ ಮಾದಿಗ ಮತ್ತು ಚಲವಾದಿ ಸಮಾಜಗಳ ಸಮಾವೇಶವನ್ನು ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಇದೇ ದಿನಾಂಕ 15 ರಂದು ನಗರದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ಮಹಾನಗರಪಾಲಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅವರನ್ನು ಮಾದಿಗ ಸಮಾಜದ ಹಿರಿಯ ಮುಖಂಡರಾದ ಬಿ.ಹೆಚ್ ವೀರಭದ್ರಪ್ಪ, ನಿವೃತ್ತ ಎಸ್ಪಿ ರವಿನಾರಾಯಣ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರೂ ಆದ ನಿವೃತ್ತ ಎಸ್ಪಿ ರುದ್ರಮುನಿ ಹಾಗೂ ಸಮಾಜದ ಮುಖಂಡರುಗಳ ನಿಯೋಗವು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಆಹ್ವಾನಿಸಿತು.

error: Content is protected !!