ಕೊಟ್ಟೂರು, ಡಿ.6- ಉಭಯ ಗಾನ ವಿಶಾರದರು, ತ್ರಿಭಾಷಾ ಕವಿವರ್ಯ, ಸಕಲ ವಾದ್ಯ ಕಂಠೀರವ ನಾಡೋಜ ಹಾಗೂ ಕಾಳಿದಾಸ ಪ್ರಶಸ್ತಿ ವಿಜೇತರಾದ ಪರಮಪೂಜ್ಯ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳವರ ಹದಿನೈದನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇದೇ ದಿನಾಂಕ 13 ರ ಶುಕ್ರವಾರ ಸಂಜೆ 6 ಗಂಟೆಗೆ ಕೊಟ್ಟೂರಿನ ಇಂದು ಕಾಲೇಜ್ನಲ್ಲಿ ಆಯೋಜನೆ ಮಾಡಲಾಗಿದೆ. ಅಂದು ಸಂಜೆ ಕನ್ನಡ ಕೋಗಿಲೆ ಕಾರ್ಯಕ್ರಮ ಖ್ಯಾತಿಯ ಗಾಯಕಿ ಕಲಾವತಿ ದಯಾನಂದ್ ಮತ್ತು ಸರಿಗಮಪ ಸೀಸನ್ 13 ರ ಗಾಯಕಿ ಪೂಜಾ ವಿಭೂತಿಮಠ್ ಇವರಿಂದ ಸಂಗೀತ ಕಾರ್ಯಕ್ರಮವಿದೆ ಎಂದು ಸಮಿತಿಯ ಸುಧಾಕರ್ ಪಾಟೀಲ್ ತಿಳಿಸಿದ್ದಾರೆ.
December 27, 2024