ನಗರದಲ್ಲಿ ಇಂದು ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ

ದಾವಣಗೆರೆ ಜಿಲ್ಲಾ ಗೃಹರಕ್ಷಕದಳ ವತಿಯಿಂದ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ ಕಾರ್ಯಕ್ರಮವು ಇಂದು ಸಂಜೆ 4ಕ್ಕೆ ನಗರದ ಜಿಲ್ಲಾ ಪೊಲೀಸ್‌ ಸಶಸ್ತ್ರ ಮೀಸಲು ಪಡೆ ಕವಾಯತು (ಡಿ.ಎ.ಆರ್‌.) ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್‌ ಹಾಜರಿರುವರು. ಜಿಲ್ಲಾ ಕಮಾಂಡೆಂಟ್‌ ಹೋಂ ಗಾರ್ಡ್ಸ್‌ ಡಾ. ಎಸ್‌.ಹೆಚ್‌.  ಸುಜಿತ್‌ಕುಮಾರ್‌ ಅವರು ಅಧ್ಯಕ್ಷತೆ ವಹಿಸುವರು.

error: Content is protected !!