ನಗರದಲ್ಲಿ ಇಂದು ವಿದ್ಯಾರ್ಥಿಗಳಿಗೆ ಥೀಮ್ ಪಾರ್ಕ್ ಉಚಿತ ವೀಕ್ಷಣೆ

ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರ ವೀಕ್ಷಣೆಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಇಂದು ಉಚಿತ ಪ್ರವೇಶ ಅವಕಾಶ ನೀಡಲಾಗಿದೆ.

ಥೀಮ್ ಪಾರ್ಕ್ ಉದ್ಘಾಟನೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಭಾಣ ದಿನದ ಪ್ರಯುಕ್ತ ಒಂದು ದಿನ ಮಾತ್ರ ಶಾಲಾ ಮಕ್ಕಳು ಥೀಮ್ ಪಾರ್ಕ್ ಅನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದ್ದಾರೆ.

ಕಲೆಯಲ್ಲಿ ಅರಳಿರುವ ಗ್ರಾಮೀಣ ಸೊಗಡಿನ ಜೀವನ ಶೈಲಿ, ಕ್ರೀಡೆ, ಜಾತ್ರೆ, ಹಬ್ಬ, ಮಾರುಕಟ್ಟೆ, ಉತ್ಸವ, ಎತ್ತುಗಳ ಮಾರಾಟ ಹಾಗೂ ಇನ್ನಿತರೆ ಅಪೂರ್ಣ ಕಲಾಕೃತಿಗಳನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ ಗ್ರೀಕ್ ವಿನ್ಯಾಸ ಶೈಲಿಯ ಬಯಲು ರಂಗ ಮಂದಿರವೂ ವಿಶೇಷ ಆಕರ್ಷಣೆಯಾಗಿದೆ. ಇವುಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ, ಆನಂದಿಸಬಹುದಾಗಿದೆ. ಉಳಿದ ದಿನಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ರೂ. 20 ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ರೂ.10 ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

error: Content is protected !!