ನಗರದಲ್ಲಿ ಇಂದು – ನಾಳೆ `ಇಗ್ನಿಟ್ರಾನ್ 2k 24′ ಕಾರ್ಯಕ್ರಮ

ದಾವಣಗೆರೆ, ಡಿ. 5- ನಗರದ ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಮತ್ತು ತಾಂತ್ರಿಕ ಸಮುದಾಯ ವಿಭಾಗದ ವತಿಯಿಂದ ನಾಳೆ ದಿನಾಂಕ 6ರ ಶುಕ್ರವಾರ, ನಾಡಿದ್ದು ದಿನಾಂಕ 7 ರ ಶನಿವಾರ ಎರಡು ದಿನಗಳ ಕಾಲ ತಾಂತ್ರಿಕತೆಯ ಕಲಿಕಾ, ಪ್ರತಿಭಾ ಕೌಶಲ್ಯದ ಹಬ್ಬವಾಗಿರುವ ಇಗ್ನಿಟ್ರಾನ್ 2k 24 ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಉಪನಿರ್ದೇಶಕ ಎಸ್.ಟಿ. ಮಾರುತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಳೆ ದಿನಾಂಕ 6 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಇಗ್ನಿಟ್ರಾನ್ 2k 24 ಕಾರ್ಯಕ್ರಮ ವನ್ನು ಡಿಎಕ್ಸ್‌ಸಿ ಲಕ್ಷ್ಫಟ್ ಇಂಜಿನಿಯರಿಂಗ್ ನಿರ್ದೇಶಕ ಬ್ರಹ್ಮಚೈತನ್ಯ ಚಿನ್ನಿವರ್ ಉದ್ಘಾಟಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಜಿಎಂ ವಿವಿ ಕುಲಾಧಿಪತಿ ಜಿ.ಎಂ. ಲಿಂಗರಾಜ್, ಕುಲಪತಿ ಡಾ.ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಹೆಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಬಿ.ಎನ್. ಸುನೀಲ್ ಕುಮಾರ್ ಭಾಗವಹಿಸಲಿದ್ದಾರೆ.

ಇಗ್ನಿಟ್ರಾನ್ 2k 24 ಪ್ರಯುಕ್ತ 9 ವಿವಿಧ ಸ್ಪರ್ಧೆಗಳು ನಡೆಯಲಿದ್ದು,  ದಿನಾಂಕ 6 ರಂದು ಬೆಳಿಗ್ಗೆ 9 ರಿಂದ ದಿನಾಂಕ  7 ರಂದು ಬೆಳಿಗ್ಗೆ 9 ರವರೆಗೆ ಸತತವಾಗಿ 24 ಗಂಟೆಗಳ ಕಾಲ `ಹ್ಯಾಕಥಾನ್’ ನಡೆಯಲಿದ್ದು, 42 ತಂಡಗಳು, 168 ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಎಂ ವಿವಿ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಹೆಚ್.ಎಸ್. ಕಿರಣ್ ಕುಮಾರ್, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಪ್ರೊ. ಟಿ.ಆರ್. ತೇಜಸ್ವಿ ಕಟ್ಟಿಮನಿ ಉಪಸ್ಥಿತರಿದ್ದರು. 

error: Content is protected !!