ಹೊಸಬೆಳವನೂರಿನಲ್ಲಿ ಬಸವೇಶ್ವರ, ಶ್ರೀ ಸಿದ್ಧಿವಿನಾಯಕ ಕಾರ್ತಿಕೋತ್ಸವ

ಹೊಸಬೆಳವನೂರಿನಲ್ಲಿ ಬಸವೇಶ್ವರ,   ಶ್ರೀ ಸಿದ್ಧಿವಿನಾಯಕ ಕಾರ್ತಿಕೋತ್ಸವ

ದಾವಣಗೆರೆ, ಡಿ. 5- ಇಂದಿನ ಹಿರಿಯರು ಹಿಂದಿನ ಕಾಲದ ಸಿಸಿ ಕ್ಯಾಮರಾಗಳಾಗಿದ್ದರು. ಊರಿಗೆ ಯಾರಾದರೂ ಹೊಸಬರು ಬಂದರೆ ಅವರ ಎಲ್ಲಾ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದರು ಎಂದು ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ತಿಳಿಸಿದರು.

ಸಮೀಪದ ಹೊಸಬೆಳವನೂರು ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ಬಸವೇಶ್ವರ ಮತ್ತು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಕಾರ್ತಿಕೋತ್ಸವ ಹಾಗೂ ಗ್ರಾಮದ ಅತ್ಯಂತ ಹಿರಿಯರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿ ತರಿದ್ದು  ಅವರು ಮಾತನಾಡಿದರು.

ಗ್ರಾಮದ ಸಾಂಸ್ಕೃತಿಕ ಮೌಲ್ಯಗಳಾಗಿರುವ ಇಂತಹ ಹಿರಿಯರನ್ನು ಸನ್ಮಾನಿಸುತ್ತಿರುವುದು ಶ್ಲ್ಯಾಘನೀಯ ಹಾಗೂ ಅವರ ಬದುಕಿನ ಸಾರ್ಥಕತೆಗೆ ಗೌರವ ಸೇರಿದಂತೆ ಎಂದರು. ಇಂತಹ ಕಾರ್ಯಕ್ರಮಗಳು ಸ್ಫೂರ್ತಿದಾಯಕವಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಬಿ. ಪ್ರಭಾಕರ್, ಹಿರಿ- ಕಿರಿಯರನ್ನು ಗೌರವಿಸುವುದೆಂದರೆ ನಮ್ಮೂರಿಗೆ ಗೌರವ ಮತ್ತು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾವೈಕ್ಯತೆಯನ್ನು ಕಾಪಾಡುತ್ತವೆ ಎಂದರು.

ಈ ಸಂದರ್ಭದಲ್ಲಿ ಕೆ. ಉಜ್ಜಪ್ಪ, ಕೆ.ಎಸ್. ಶೇಖರಪ್ಪ, ಹೆಚ್. ಧರ್ಮಪ್ಪ, ಬಿ.ಜಿ. ಬಸವರಾಜಪ್ಪ, ಹೆಚ್. ತಿಪ್ಪೇಶಪ್ಪ, ಮಂಜಪ್ಪ ಮೇಷ್ಟ್ರು, ಹೆಚ್.ಎಂ. ರೇವಣಸಿದ್ದಪ್ಪ, ವಿಠ್ಠಲಾಪುರದ ಶಿವಮೂರ್ತ್ಯಪ್ಪ, ಕುಂಬಾರ ಶೇಖರಪ್ಪ, ಎಂ.ಎಸ್. ಪರಮೇಶ್ವರಪ್ಪ, ಪಾಲಪ್ಳರ ನಿಂಗಪ್ಪ, ವಿಠ್ಠಲಾಪುರದ ರಾಮಚಂದ್ರಪ್ಪ, ಶ್ರೀಮತಿ ಕರಿಬಸಮ್ಮ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಎಂ.ಎಸ್. ಮಲ್ಲಿಕಾರ್ಜುನ ಸ್ವಾಗತಿಸಿದರು. ಕೆ.ಎಂ. ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಠ್ಠಲಾಪುರದ ರತ್ನಮ್ಮ ವಂದಿಸಿದರು.

error: Content is protected !!