ಕನ್ನಡ ಕೇವಲ ಭಾಷೆಯಲ್ಲ, ಅದು ಸಂಸ್ಕೃತಿ ಪ್ರತೀಕ

ಕನ್ನಡ ಕೇವಲ ಭಾಷೆಯಲ್ಲ, ಅದು ಸಂಸ್ಕೃತಿ ಪ್ರತೀಕ

ರಾಜ್ಯೋತ್ಸವ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಪ್ರೊ. ವಿದ್ಯಾಧರ ವೇದವರ್ಮ

ದಾವಣಗೆರೆ, ಡಿ.5- ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಅದು ಕೇವಲ ಭಾಷೆಯಲ್ಲ, ಶ್ರೇಷ್ಠ ಸಂಸ್ಕೃತಿಯ ಪ್ರತೀಕ ಎಂದು ಆರ್‌.ಎಲ್‌.ಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ. ವಿದ್ಯಾಧರ ವೇದವರ್ಮ ಹೇಳಿದರು.

ಕರ್ನಾಟಕ ಜನಶಕ್ತಿ ಮತ್ತು ಕಾಯಕ ಜೀವಿ ಕಟ್ಟಡ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕುಂದುವಾಡ ರಸ್ತೆಯ ಕಾಡಪ್ಪರ ಬಾವಿ ಹತ್ತಿರ ಕಳೆದ ವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಕಾನೂನು ಅರಿವು ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಭಾಷೆಯ ಉಳಿವು ಆ ಭಾಷೆ ಮಾತನಾಡುವವರನ್ನು ಅವಲಂಬಿಸಿರುತ್ತದೆ. ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವುದರಿಂದ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ದಂತಾಗುತ್ತದೆ. ಇಂತಹ ಜಾಗತಿಕ ಪ್ರಪಂಚದಲ್ಲೂ ನಮ್ಮ ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿ ರುವ ಕನ್ನಡ ಪರ ಹೋರಾಟ ಸಂಘಗಳು, ಕವಿ ಗಳು ಮತ್ತು ಚಿಂತಕರ ಪಾತ್ರ ದೊಡ್ಡದು ಎಂದರು.

ಕಾನೂನು ಅರಿವು ಕುರಿತು ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂಸಾಬ್‌ ಅವರು, ಸಂವಿಧಾನ ಮಹಾನ್‌ ಗ್ರಂಥವಾಗಿದ್ದು, ಬೇರೆ ದೇಶಗಳ ಸಂವಿಧಾನದ ಆಶಯಗಳನ್ನು ಎರ ವಲು ಪಡೆದು ಮತ್ತು ನಮ್ಮ ದೇಶದ ಎಲ್ಲಾ ಕ್ಷೇತ್ರ ಗಳಲ್ಲೂ ಅನುಭವ ಇರುವ ಸಂಪನ್ಮೂಲ ವ್ಯಕ್ತಿ ಗಳನ್ನು ಕ್ರೋಢೀಕರಿಸಿ ಅಂದು ರಚಿಸಿದ ಸಂವಿ ಧಾನ ಕೆಲವೇ ತಿದ್ದುಪಡಿಯೊಂದಿಗೆ ಇಂದಿಗೂ ಪ್ರಸ್ತುತವೆನಿಸುವಂತೆ, ಎಲ್ಲಾ ವರ್ಗದ ಜನರ ಅಭಿವೃದ್ಧಿಯನ್ನು ಹೊಂದಿರುವ ಒಂದು ಯಶಸ್ವೀ ಸಂವಿಧಾನವನ್ನು ನಮ್ಮ ಹಿರಿಯರು ನಮಗೆ ಕೊಟ್ಟಿ ದ್ದಾರೆ. ಅಂತಹ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಕರ್ನಾಟಕ ಜನಶಕ್ತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವಿತ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೀಪಲ್ಸ್‌ ಲಾಯರ್‌ ಗಿಲ್ಡ್‌ ಸಂಚಾಲಕ ಅನಿಸ್‌ ಪಾಷ, ಪಾಲಿಕೆ ಸದಸ್ಯೆ ಆಶಾ ಉಮೇಶ್‌, ವಕೀಲ ಸತೀಶ್‌ ಅರವಿಂದ್‌ ಉಪಸ್ಥಿತರಿದ್ದರು. ಆದಿಲ್‌ ಖಾನ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹನುಮಂತಪ್ಪ ಕರೂರು ಸ್ವಾಗತಿಸಿದರೆ, ಸೈಯದ್‌ ಅಶ್ಫಾಕ್‌ ನಿರೂಪಿಸಿದರು.

error: Content is protected !!