ನಗರದಲ್ಲಿ ಇಂದು ತಾಲ್ಲೂಕು ಕಸಾಪದಿಂದ ಅಕ್ಕಮಹಾದೇವಿ ಆದರ್ಶಗಳು ಕುರಿತು ದತ್ತಿ

ನಗರದಲ್ಲಿ ಇಂದು ತಾಲ್ಲೂಕು ಕಸಾಪದಿಂದ ಅಕ್ಕಮಹಾದೇವಿ ಆದರ್ಶಗಳು ಕುರಿತು ದತ್ತಿ

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಬೂದಾಳ್‌ ರಸ್ತೆಯಲ್ಲಿನ ಹರಪನಹಳ್ಳಿ ಮುಪ್ಪಣ್ಣ ಸಿದ್ದಮ್ಮ ಪ್ರೌಢಶಾಲೆ ಆವರಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಅಕ್ಕಮಹಾದೇವಿ ಆದರ್ಶಗಳು ಕುರಿತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಸದಸ್ಯ ಮಲ್ಲಿಕಾರ್ಜುನ್‌ ಆರ್‌. ಹಲಸಂಗಿ ಉಪನ್ಯಾಸ ನೀಡಲಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯ ಆಂಜನೇಯ ಜಿ. ಅಧ್ಯಕ್ಷತೆ ವಹಿಸುವರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ, ನಿರ್ದೇಶಕರಾದ ಶ್ರೀಮತಿ ಕೆ.ಜಿ. ಸೌಭಾಗ್ಯ, ಆರ್‌. ಶಿವಕುಮಾರ್‌ ಮುಖ್ಯ ಅತಿಥಿಗಳಾಗಿ ಆಗಮಿಸುವರು. ತಾಲ್ಲೂಕು ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ದತ್ತಿ ದಾನಿಗಳು: ಕಬ್ಬೂರು ಶ್ರೀಮತಿ ಕಲ್ಲಮ್ಮ ಮಂಡ್ಲೂರು ತಿಮ್ಮಪ್ಪ, ಎಂ.ಟಿ. ಜಯದೇವಪ್ಪ ಕೆ.ಬಿ. ಬಡಾವಣೆ, ದಾವಣಗೆರೆ, ಲಿಂ|| ಶ್ರೀಮತಿ ಲಿಂಗಮ್ಮ ಜಿ.ಎನ್‌. ಲಿಂಗಪ್ಪ ಸ್ಮಾರಕ, ಪ್ರೊ. ಜಿ.ಎನ್‌. ಲಿಂಗಪ್ಪ ಮತ್ತು ಮಕ್ಕಳು, ದಾವಣಗೆರೆ, ಕೆಂಚನಗೌಡರ ಶ್ರೀಮತಿ ನಾಗಮ್ಮ ಚನ್ನಬಸವನಗೌಡ, ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯರು ಕೆಂಚನಗೌಡ, ದಾವಣಗೆರೆ.

error: Content is protected !!