ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂವರ ಸೋಲಿಗೆ ಜಿ.ಎಂ.ಸಿದ್ದೇಶ್ವರ ಕಾರಣ

ಚನ್ನಗಿರಿ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಆರೋಪ

ದಾವಣಗೆರೆ, ಡಿ.4- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರೇ ಪ್ರಮುಖ ಕಾರಣ ಎಂದು ಚನ್ನಗಿರಿ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ಮೂವರು ಅಭ್ಯರ್ಥಿಗಳಿಗೆ ಹಣ ನೀಡಿ ಬಿಜೆಪಿ ಅಭ್ಯರ್ಥಿ ಗಳನ್ನು ಸೋಲಿಸಿದ್ದಾರೆ. ಈ ಕುರಿತ ದಾಖಲೆಗಳು ತಮ್ಮ ಬಳಿ ಇವೆ. ಸೂಕ್ತ ಸಮಯದಲ್ಲಿ ಪಕ್ಷದ
ಹೈಕಮಾಂಡಿಗೆ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ಸಿದ್ದೇಶ್ವರ ಅವರು ಹಣ ಮತ್ತು ಬೆಂಬಲ ನೀಡಿರುವ ಕುರಿತಂತೆ ಸೂಕ್ತ ದಾಖಲಾತಿಗಳು ನಮ್ಮ ಬಳಿ ಇದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ ಎಂದ ಅವರು, ಇಂಥವರ ವಿರುದ್ಧ ಏಕೆ ಕ್ರಮವಿಲ್ಲ ಎಂದು ಪ್ರಶ್ನಿಸಿದರು.

ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಕುರಿತಂತೆ ಹೈಕಮಾಂಡ್ ಕೇಳಿದರೆ ಸೂಕ್ತ ದಾಖ ಲಾತಿಗಳು, ಸಾಕ್ಷ್ಯಗಳನ್ನು ನೀಡುತ್ತೇವೆ. ಗಾಳಿ ಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವು ದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸೋಲಲು ಕಾರಣ ಸಿದ್ದೇಶ್ವರ, ಬಿ.ಪಿ.ಹರೀಶ್ ಅವರಂಥ ನಾಲ್ಕೈದು ನಾಯಕರೇ ಕಾರಣ. ಒಡೆದು ಆಳಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದರು. ದುಡ್ಡು, ಅಧಿಕಾರ, ದುರಹಂಕಾರದಿಂದಾಗಿ ಬಿಜೆಪಿ ಕೇವಲ 66 ಸ್ಥಾನಗಳನ್ನು ಪಡೆಯಬೇಕಾಯಿತು ಎಂದರು.

ಲೋಕಾಯುಕ್ತ ಪ್ರಕರಣದಲ್ಲಿ ತನ್ನ ತಂದೆ  ಮಾಡಾಳ್ ವಿರೂಪಾಕ್ಷಪ್ಪ ಶಾಸಕರಾಗಿದ್ದಾಗ ಬಂಧನಕ್ಕೊಳಗಾಗಲು ಜಿ.ಎಂ.ಸಿದ್ದೇಶ್ವರ ಮಾಡಿದ ಪಿತೂರಿಯೇ ಕಾರಣ. ಕೇವಲ ಚುನಾವಣೆ ವೇಳೆ ಮಾತ್ರವಲ್ಲ, ಎರಡು ವರ್ಷಗಳ ಹಿಂದಿನಿಂದಲೂ ಪಿತೂರಿ ಮಾಡಿದ್ದರು ಎಂದು ಆರೋಪಿಸಿದರು.

ಯಡಿಯೂರಪ್ಪನವರ ಕುಟುಂಬದ ಬಗ್ಗೆ ಮಾತನಾಡುವ ಮೂಲಕ ಬಿ.ಪಿ.ಹರೀಶ್ ಜ್ಯೂನಿಯರ್ ಯತ್ನಾಳ್ ಆಗಲು ಹೊರಟಿದ್ದಾರೆ ಎಂದು ಮಲ್ಲಿಕಾರ್ಜುನ್ ಕಿಡಿಕಾರಿದರು.  

ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಪ್ರವೀಣ್, ರಾಜು ವೀರಣ್ಣ, ಚಂದ್ರು, ಮಲ್ಲಿಕಾರ್ಜುನ್ ಪಟ್ಲೆ, ಮಂಜು, ನಾಗರಾಜ್, ಸುಮಂತ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!