ದಾವಣಗೆರೆ, ಡಿ.5- 2023-24ನೇ ಸಾಲಿನ ತ್ರಿಚಕ್ರ ವಾಹನದ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ವಿಮೆ ಮುಂತಾದ ದಾಖಲಾತಿಗಳು ಫಲಾನುಭವಿಗಳ ಹೆಸರಿನಲ್ಲಿ ನೋಂದಾಯಿತವಾಗಿರುತ್ತದೆ. ವಿಶ್ವ ವಿಕಲಚೇತನರ ದಿನಾಚ ರಣೆಯ ಪ್ರಯುಕ್ತ ವಿಧಾನಸಭಾ ಕ್ಷೇತ್ರವಾರು ತಲಾ ಇಬ್ಬರು ಫಲಾನುಭವಿ ಗಳಂತೆ 14 ಫಲಾನುಭವಿಗಳಿಗೆ ಗಣ್ಯರ ಸಮ್ಮುಖದಲ್ಲಿ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ವಿತರಿಸಲಾಗಿದೆ. ಉಳಿದ ತ್ರಿಚಕ್ರ ವಾಹನಗಳ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರಿಂದ ದಿನಾಂಕ ಪಡೆದು ವಿತರಿಸಲಾಗುತ್ತದೆ.
ವಾಹನ ಪಡೆಯುವ ಫಲಾನುಭವಿಗಳು ಕಚೇರಿಯಲ್ಲಿ ಯಾರಿಗೂ ಹಣ ಸಂದಾಯ ಮಾಡದಂತೆ, ಒಂದು ವೇಳೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಹೆಸರಿನಲ್ಲಿ ಮಧ್ಯವರ್ತಿಗಳು ಹಣ ಕೇಳಿದ್ದಲ್ಲಿ ಈ ಕಚೇರಿಗೆ ದೂರು ಸಲ್ಲಿಸಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ ಪ್ರಕಾಶ್ ತಿಳಿಸಿದ್ದಾರೆ.