ಹರಪನಹಳ್ಳಿ, ಡಿ.4- ಕಟ್ಟೆಮನೆ ದೈವದವರು ಕೊಟ್ಟೂ ರಿನಲ್ಲಿ ನಡೆಯುವ ಯುಗಮಾನೋತ್ಸವ ದಲ್ಲಿ ಭಾಗವಹಿಸುವಂತೆ ರಂಭಾಪುರಿ ಜಗದ್ಗುರುಗಳನ್ನು ಆಹ್ವಾನಿಸಿದರು.
ಬರುವ ಮಾರ್ಚ್ 20 ರಿಂದ ಏಪ್ರಿಲ್ 3ನೇ ರವರೆಗೆ ನಡೆಯುವ ಆದಿ ಜಗದ್ಗುರು ಪಂಚಚಾರ್ಯ ಯುಗಮಾನೋತ್ಸವಕ್ಕೆ ರಂಭಾಪುರಿ ಶ್ರೀಗಳಿಗೆ ಕೊಟ್ಟೂರು ಕಟ್ಟೆ ಮನಿ ದೈವದವರಿಂದ ಭಿನ್ನವಿಸಲಾಯಿತು.
ಚಿಕ್ಕಮೇಗಳಗೆರೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈ ಆಹ್ವಾನ ನೀಡಲಾಯಿತು. ಈ ಸಂದರ್ಭದಲ್ಲಿ ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಗಿ ಹಿರೇಮಠಾಧ್ಯಕ್ಷ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಎಂ.ಎಂ.
ಜೆ. ಹರ್ಷವರ್ಧನ್, ಆರ್.ಎಂ. ಗುರು ಸ್ವಾಮಿ, ನೀಲಕಂಠಯ್ಯ, ಡಾ. ವಿಜಯ ಕುಮಾರ್ ಅಜ್ಜನಗೌಡರು, ಆರ್. ಎಂ. ಗುರು, ಮಂಜುನಾಥ ಗೌಡ್ರು, ಶಿವ ಕುಮಾರ ಗೌಡ್ರು, ಸೋಮಶೇಖರ ಗೌಡ್ರು, ಅಕ್ಷಯ ಗೌಡ, ಸತೀಶ್, ಬಂಡ್ರಿ ವೀರೇಶ್, ಮೋರಿಗೆರೆ ಪ್ರಶಾಂತ್, ಹರಪನಹಳ್ಳಿ ಗುರು ಬಸವರಾಜ್, ಡಿಶ್ ಮಂಜುನಾಥ್ ಹಾಗೂ ರಾಮಲಿಂಗೇಶ್ವರ ದೇವಸ್ಥಾನದ ದೈವಸ್ಥರು, ಚಾನುಕೋಟಿ ಮಠದ ಶ್ರೀಗಳು, ಕೂಡ್ಲಿಗಿ ಹಿರೇಮಠದ ಶ್ರೀಗಳು ಉಪಸ್ಥಿತರಿದ್ದರು.