ಹರಿಹರ,ಡಿ.4- ತಾಲ್ಲೂಕಿನ ಮಲ್ಟಿಪರ್ಪಸ್ ಹಾಗೂ ಮೆಕ್ಯಾನಿಕ್ ಸಂಘದ ಅಧ್ಯಕ್ಷರಾಗಿ ಶೇಖ್ ಕಮ್ಯೂನಿಕೇಶನ್ಸ್ ಮಾಲೀಕ ಶೇಖ್ ಮೆಹಬೂಬ್ ಕಣವಿ ಆಯ್ಕೆಯಾಗಿದ್ದಾರೆ.
ನಗರದ ಮುನ್ಸಿಪಲ್ ಕಾಂಪ್ಲೆಕ್ಸ್ನಲ್ಲಿ ಚುನಾವಣೆ ನಡೆಯಿತು. ಸತತ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಸಂತು ಕಮ್ಯೂನಿಕೇಶನ್ಸ್ ಮಾಲೀಕ ಸಂತೋಷ ಗುಡಿಮನಿ ಅವರು ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣ ಚುನಾವಣೆ ನಡೆಯಿತು. ಒಟ್ಟು 101 ಜನ ಸಂಘದ ಸದಸ್ಯರಿದ್ದು, 94 ಜನ ಸದಸ್ಯರು ಮತ ಚಲಾಯಿಸಿದರು.
ಸಂತೋಷ ಗುಡಿಮನಿ, ಸಯ್ಯದ್, ಸಾಜಿದ್, ಜಾವೀದ್, ಸಂಜೀವಗೌಡ, ಶಿವಕುಮಾರ್, ಅವಿನಾಶ್, ಅಬ್ದುಲ್ ವಾಹಬ್, ರಫೀಕ್, ಪ್ರಶಾಂತ್, ಆಬಿದ್, ಸಾದಿಕ್, ಅಕ್ಷಯ್, ಅರ್ಷದ್ ಸೇರಿದಂತೆ ಇತರರು ಚುನಾವಣೆ ಕಾರ್ಯ ನಡೆಸಿದರು.