ಅಪರಿಚಿತ ಮಹಿಳೆಯ ಶವ ಪತ್ತೆ

ದಾವಣಗೆರೆ, ಡಿ.2- ನಗರದ ವೆಂಕಟೇಶ್ವರ ವೃತ್ತದ ಬಳಿ ದಿನಾಂಕ 28 ರಂದು ಮಧ್ಯಾಹ್ನ ಯಾವುದೋ ಕಾರಣದಿಂದ ಮೃತಪಟ್ಟ ಸುಮಾರು 65 ರಿಂದ 70 ವರ್ಷವಿರುವ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ಮೃತಳು ಗುಲಾಬಿ ಬಣ್ಣದ ಸ್ವೆಟರ್, ಹಸಿರು ಮತ್ತು ಕ್ರೀಮ್‌ ಮಿಶ್ರಿತ ಸೀರೆ, ಬೂದು ಬಣ್ಣದ ಲಂಗ, ಕೆಂಪು ಮತ್ತು ಕ್ರೀಮ್‌ ಮಿಶ್ರಿತ ಬಣ್ಣದ ಜಾಕೆಟ್‌ ಧರಿಸಿರುತ್ತಾಳೆ. ಮಹಿಳೆಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಆರ್‌.ಎಂ.ಸಿ. ಪೊಲೀಸ್‌ ಠಾಣೆ ಅಥವಾ ಪೊಲೀಸ್‌ ನಿಯಂತ್ರಣ ಕೋಣೆಗೆ ತಿಳಿಸಬಹುದು.

error: Content is protected !!