ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳ ವರ್ಧಂತ್ಯುತ್ಸವ

ದಾವಣಗೆರೆ, ಡಿ. 2- ಶಿವಮೊಗ್ಗ ಜಿಲ್ಲಾ ಹೊಳೆ ಹೊನ್ನೂರು ಸಮೀಪದ ತುಂಗ ಮತ್ತು ಭದ್ರಾ ನದಿಗಳ ಸಂಗಮ ಸ್ಥಳ, ಪುರಾಣ ಪ್ರಸಿದ್ಧವಾದ ಕೂಡಲಿ ಮಹಾ ಕ್ಷೇತ್ರದಲ್ಲಿರುವ ಜಗದ್ಗುರು ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾ ಸಂಸ್ಥಾನದ ಹಿರಿಯ ಪೀಠಾಧಿಪತಿಗಳಾದ ಜಗದ್ಗುರು ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳವರ ವರ್ಧಂತ್ಯುತ್ಸವ ನಗರದ ಜಯದೇವ ವೃತ್ತದ ಬಳಿಯ ಶಂಕರ ಮಠದಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿತು. ವರ್ಧಂತ್ಯುತ್ಸವದ ನಿಮಿತ್ಯ ಶ್ರೀಮಠದ ಮೂಲ ದೇವರುಗಳಿಗೆ ವಿಶೇಷ ಪೂಜೆ, ಅಭಿಷೇಕ, ಹೋಮಗಳನ್ನು ನಡೆಸಲಾಯಿತು.

error: Content is protected !!