ದಾವಣಗೆರೆ, ಡಿ.2- ಮಹಾನಗರ ಪಾಲಿಕೆ ವತಿಯಿಂದ ಮೂರು ದಿನಗಳ ಕಾಲ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನಗರದ ಅಮೃತ ಪುರುಷರನ್ನು ಸನ್ಮಾನಿಸಲಾಯಿತು.
ಅಂದು ಸನ್ಮಾನ ಕಾರ್ಯಕ್ರಮಕ್ಕೆ ವೈಯಕ್ತಿಕ ಕಾರ್ಯನಿಮಿತ್ತ ಗೈರು ಹಾಜರಾಗಿದ್ದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ನಿವಾಸಕ್ಕೆ ತೆರಳಿ ಪೌರ ಸನ್ಮಾನ ನೀಡಲಾಯಿತು.
ಮಹಾಪೌರರಾದ ಕೆ. ಚಮನ್ ಸಾಬ್ ಅವರು ರವೀಂದ್ರನಾಥ್ ಅವರನ್ನು ಗೌರವಿಸಿದರು. ನಗರಪಾಲಿಕೆ ಸದಸ್ಯರುಗಳಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್, ಕೆ.ಎಂ. ವೀರೇಶ್, ಕಾಂಗ್ರೆಸ್ ಮುಖಂಡರಾದ ಗಣೇಶ್ ಹುಲ್ಲುಮನೆ ಮತ್ತು ಇತರರು ಉಪಸ್ಥಿತರಿದ್ದರು.