ದಾವಣಗೆರೆ, ಡಿ. 2- ಕೆಎಸ್ಎಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಂವಿಧಾನದ ದಿನದ ಅಂಗವಾಗಿ ಮಕ್ಕಳಿಗಾಗಿ ಕಾನೂನು ಅರಿವು – ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀಮತಿ ಹೆಚ್.ಕೆ. ರೇಷ್ಮ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ರಸ್ತೆ ಸಂಚಾರಿ ನಿಯಮ ಪಾಲಿಸದಿದ್ದರೆ ಅಪಘಾತಕ್ಕೀಡಾಗಿ ಭವಿಷ್ಯದ ಕನಸು ನುಚ್ಚು ನೂರಾಗಬಹುದು. ಆದ್ದರಿಂದ ಕಾನೂನಿನ ನಿಯಮ ಪಾಲಿಸಿ, ಪ್ರಜ್ಞಾವಂತ ಪ್ರಜೆಗಳಾಗಿ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನ್ಯಾಯಾಧೀಶರಾದ ಮಹಾವೀರ ಮ.ಕರೆಣ್ಣವರ ಮಾತನಾಡಿ, ಬಾಲ್ಯ ವಿವಾಹ, ಪೋಕ್ಸೋ ಹಗರಣಗಳ ಕುರಿತು ಉದಾಹರಣೆ ಸಹಿತ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಶ್ರೀಮತಿ ದಾಕ್ಷಾಯಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಎಂ.ಎಸ್. ಹರ್ಷಿತಾ, ಶ್ರೀಮತಿ ತಹಸೀನ್ ತಾಜ್, ಶ್ರೀಮತಿ ಹೇಮಲತಾ, ಹೆಚ್.ವೈ. ಹನುಮಂತಪ್ಪ, ವಿಜಯಕುಮಾರ್, ಭರತ್ ಉಪಸ್ಥಿತರಿದ್ದರು.
ಇ. ರವೀಂದ್ರಕುಮಾರ್ ಸ್ವಾಗತಿಸಿದರು. ಬಿ.ಎಸ್. ಚನ್ನಬಸಪ್ಪ ವಂದಿಸಿದರು. ಶ್ರೀಮತಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.