ಆರ್.ವಿ.ಜಿ.ಕೆ.ಯಲ್ಲಿ ತಾ|| ಕಸಾಪದಿಂದ ರಾಜ್ಯೋತ್ಸವ

ಆರ್.ವಿ.ಜಿ.ಕೆ.ಯಲ್ಲಿ ತಾ|| ಕಸಾಪದಿಂದ ರಾಜ್ಯೋತ್ಸವ

ದಾವಣಗೆರೆ, ಡಿ.1- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಆರ್.ವಿ.ಜಿ.ಕೆ. ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಸಲಾಯಿತು.

ಪ್ರೌಢಶಾಲೆ ಮುಖ್ಯೋಪಾಧ್ಯಾಯ ನಿರಂಜನ್ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ಆರ್.ವಿ.ಜಿ.ಕೆ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕನ್ನಡ ನಾಡು-ನುಡಿ ವೈಶಿಷ್ಟ್ಯ ಮತ್ತು ಕನ್ನಡ ರಾಜ್ಯೋತ್ಸವ ಕುರಿತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮತಿ ಜಯಪ್ಪ ವಿದ್ಯಾರ್ಥಿ ಗಳಿಗೆ ದತ್ತಿ ಉಪನ್ಯಾಸ ನೀಡಿದರು. ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಇಂದು ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನೂ ಎದುರಿಸುತ್ತಿದೆ. ಅವೆಲ್ಲವುಗಳನ್ನೂ ಮೆಟ್ಟಿನಿಂತು ಗಟ್ಟಿಗೊಳ್ಳುವ ಶಕ್ತಿ ಕನ್ನಡಕ್ಕಿದೆ. ಅದಕ್ಕಾಗಿ ನಾವೆಲ್ಲರೂ ಕಂಕಣಬದ್ಧರಾಗಬೇಕಾಗಿದೆ. ಮಕ್ಕಳು ಮನೆಯಲ್ಲಿ, ಶಾಲೆಯಲ್ಲಿ, ಅಂಗಡಿ ಮುಂಗಟ್ಟು ಗಳಲ್ಲಿ ಕನ್ನಡವನ್ನೇ ಹೆಚ್ಚು ಬಳಸಬೇಕು. 

ಬಳಸಿದಷ್ಟು ಕನ್ನಡ ಭಾಷೆ ಬೆಳೆಯುತ್ತದೆ. ಬಳಸದಿರುವ ಭಾಷೆ ನಾಶವಾಗುತ್ತದೆ ಎಂದು ಕನ್ನಡ ಭಾಷೆಯ ವೈಶಿಷ್ಟ್ಯವನ್ನು ಸವಿವರವಾಗಿ ತಿಳಿಸಿದರು. ಕನ್ನಡ ಭಾಷೆಯ ಸಿರಿವಂತಿಕೆ, ಕನ್ನಡ ನಾಡಿನ ಸಾಂಸ್ಕೃತಿಕ ಭವ್ಯ ಪರಂಪರೆ, ಪ್ರಾಕೃತಿಕ ಸಂಪತ್ತು, ಶಿಲ್ಪಕಲೆಯ ವೈಭವ, ಅಪಾರ ಸಾಹಿತ್ಯ ರಾಶಿಯಿಂದ ಇಡೀ ಜಗತ್ತಿನ ಕಣ್ಣನ್ನೇ ತನ್ನತ್ತ ಸೆಳೆಯುತ್ತಿರುವ ಕರ್ನಾಟಕದ ಭವ್ಯತೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಾ, ನಾವು ಕೇವಲ ನವೆಂಬರ್ ಕನ್ನಡಿಗರಾಗದೇ ನಂಬರ್ ಒನ್ ಕನ್ನಡಿಗರಾಗೋಣ. ಕನ್ನಡ ಕೇವಲ ನಮ್ಮ ಕೊರಳಿನ ಭಾಷೆಯಾಗದೆ ಕರುಳಿನ ಭಾಷೆಯಾಗಲಿ ಎಂದು ಶುಭ ಹಾರೈಸಿದರು.

ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ನುಡಿಯಲ್ಲಿ ದತ್ತಿದಾನಿಗಳನ್ನು ಸ್ಮರಿಸಿ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ವಾಸವಿ ಶಾಲೆಯ ಅಧ್ಯಕ್ಷರಾದ ಆರ್.ಎಲ್. ಪ್ರಭಾಕರ್ ಹಾಗೂ ತಾಲ್ಲೂಕು ಕಸಾಪ ನಿರ್ದೇಶಕರಾದ ಕೆ.ಜಿ. ಸೌಭಾಗ್ಯಮ್ಮ ಈ ಸಂದರ್ಭದಲ್ಲಿ ಮಾತನಾಡಿದರು. 

10ನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥಿಸಿ ದರು. ಶಿಕ್ಷಕ ವಿಶ್ವನಾಥ್ ಕೆ.ಪಿ. ಸ್ವಾಗತಿಸಿದರು. ಶಿಕ್ಷಕ ಕೊಟ್ರೇಶ್ ನಿರೂಪಿಸಿದರು. ಶಿಕ್ಷಕ ಪ್ರದೀಪ್ ಹೆಚ್. ವಂದಿಸಿದರು.

error: Content is protected !!