ನಗರದ ಗುಡ್ಡಾಪುರದ ದಾನಮ್ಮ ದೇವಸ್ಥಾನದಲ್ಲಿ ಪುರಾಣ ಇಂದು ಮುಕ್ತಾಯ

ನಗರದ ಗುಡ್ಡಾಪುರದ ದಾನಮ್ಮ ದೇವಸ್ಥಾನದಲ್ಲಿ ಪುರಾಣ ಇಂದು ಮುಕ್ತಾಯ

ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ಗುಡ್ಡಾಪುರದ ದಾನಮ್ಮ ದೇವಿ ದೇವಸ್ಥಾನದಲ್ಲಿ ಛಟ್ಟಿ ಅಮಾವಾಸ್ಯೆ ಜಾತ್ರಾ ಮಹೋತ್ಸವದ ಪ್ರಯುಕ್ತ  ಪುಟ್ಟರಾಜ ಗವಾಯಿಗಳವರಿಂದ ರಚಿತವಾದ ಸಂಗೀತ ಮತ್ತು ಸಾಹಿತ್ಯ, ಜಾನಪದಗಳೊಂದಿಗೆ ಶಿವಶರಣೆ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಪ್ರವಚನ ಕಾರ್ಯಕ್ರಮವು ಕಳೆದ 10 ದಿನಗಳಿಂದ ನಡೆಯುತ್ತಿದ್ದು, ಇಂದು ಮುಕ್ತಾಯವಾಗಲಿದೆ.

ನಾಳೆ ಭಾನುವಾರ  ಭಾನುವಾರ ಛಟ್ಟಿ ಅಮವಾಸ್ಯೆ ಪ್ರಯುಕ್ತ ಬೆಳಿಗ್ಗೆ ಶ್ರೀ ದೇವಿಗೆ ಅಭಿಷೇಕ, ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವುದು, ಮದುವೆ ಆಗುವವರಿಗೆ ಕಂಕಣ ದಂಡಿ ಹಾಕಿಸುವ ಕಾರ್ಯಕ್ರಮ ಜರುಗಲಿದೆ. ಕೈಗಾರಿಕೋದ್ಯಮಿ ಶ್ರೀಮತಿ ಶೀಲಾ ಮತ್ತು ಡಾ. ಅಥಣಿ ವೀರಣ್ಣ ಮತ್ತು ಸಹೋದರರು ದಾಸೋಹ ಸೇವಾರ್ಥಿಗಳಾಗಿದ್ದಾರೆ.

error: Content is protected !!