ಪಿ.ಬಿ.ರಸ್ತೆ ಕರೂರು ರಸ್ತೆ ಕ್ರಾಸ್ ಬಳಿ ಇರುವ ಪಂಚದೇವಸ್ಥಾನಗಳ ಮಹಾಕ್ಷೇತ್ರದಲ್ಲಿ ಶ್ರೀ ಶನೇಶ್ವರಸ್ವಾಮಿ ಕಾರ್ತಿಕೋತ್ಸವ ಪ್ರಯುಕ್ತ ಇಂದು ಬೆಳಿಗ್ಗೆ 6.30ಕ್ಕೆ ಪಂಚದೇವರುಗಳಿಗೆ ಶ್ರೀಕಾಶಿವಿಶ್ವನಾಥಲಿಂಗ ಹಾಗೂ ಶ್ರೀ ಶನೇಶ್ವರಸ್ವಾಮಿಗಳಿಗೆ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಅಲಂಕಾರ ಬೆಳಿಗ್ಗೆ 9 ರಿಂದ ಶ್ರೀ ಶನೇಶ್ವರ ಸ್ವಾಮಿ ಸಹಿತ ಪಂಚದೇವರುಗಳ ಪಲ್ಲಕ್ಕಿ ಉತ್ಸವ ಇರುತ್ತದೆ. ಸಂಜೆ 6.30ಕ್ಕೆ ಪಂಚದೇವಸ್ಥಾನಗಳ ಆವರಣದಲ್ಲಿ ಶ್ರೀ ಶನೇಶ್ವರಸ್ವಾಮಿ ಕಾರ್ತೋಕೋತ್ಸವ ನಡೆಯಲಿದೆ.
January 13, 2025