ಅಪ್ಪರ್ ಭದ್ರಾ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗಿದೆ.
– ಬಿ. ದೇವೇಂದ್ರಪ್ಪ, ಶಾಸಕರು, ಜಗಳೂರು
ಜಗಳೂರು, ನ. 28 – 6 ಕೋಟಿ ವೆಚ್ಚದ ಚಳ್ಳಕೆರೆ-ಅರಭಾವಿ ಎಸ್ ಎಚ್-45 ರಸ್ತೆ ನವೀಕರಣ ಕಾಮಗಾರಿಗೆ ಶಾಸಕ ಬಿ. ದೇವೇಂದ್ರಪ್ಪ ತಾಲ್ಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಇಂದು ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಗುತ್ತಿಗೆದಾರರು ಹಾಗೂ ಇಂಜಿನಿಯರ್ ಗಳು ಕಾಳಜಿ ವಹಿಸಿ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಗುಣಮಟ್ಟ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸರ್ಕಾರ ಜನಪರ, ಅಭಿವೃದ್ದಿಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರೈತರ ಅನುಕೂಲಕ್ಕಾಗಿ ಸಿದ್ದಿಹಳ್ಳಿ ಮೂಡಲ ಮಾಚಿಕೆರೆ ಮಧ್ಯೆ ಜಿನಿಗಿ ಹಳ್ಳದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುವೆ. ನನಗೆ ಅಧಿಕಾರ ಶಾಶ್ವತವಲ್ಲ ಜನ ಸೇವೆಯೇ ನನ್ನ ಗುರಿಯಾಗಿದೆ ಎಂದರು.
ಅಪ್ಪರ್ ಭದ್ರಾ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸ ಲಾಗಿದೆ. ಮುಖ್ಯ ಇಂಜಿನಿಯರ್ ಚಿತ್ತಯ್ಯ ಅವರು 2025 ಅ. 2 ಗಾಂಧಿ ಜಯಂತಿ ವೇಳೆಗೆ ತಾಲ್ಲೂಕಿಗೆ ನೀರು ಹರಿಸುವ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಸೋಲಿನಿಂದ ಹತಾಶರಾಗಿ ವಿರೋಧ ಪಕ್ಷದವರು 5 ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿ ದ್ದಾರೆ. ಗ್ಯಾರಂಟಿ ಯೋಜನೆ ಅನುದಾನ ಅಭಿವೃದ್ದಿ ಇಲಾಖೆಗಳ ಅನುದಾನ ಬೇರೆ ಬೇರೆಯಾಗಿದ್ದು. ಅನುದಾನಕ್ಕೆ ಕೊರತೆಯಿಲ್ಲ ಅಭಿವೃದ್ದಿ ಕಾಮಗಾರಿಗಳು ಸುಗಮವಾಗಿ ನಡೆಯುತ್ತವೆ ಎಂದರು.
ಇಂಜಿನಿಯರ್ ಸೌರಬ್ ಮಾಹಿತಿ ನೀಡಿ, ಸಿಆರ್‌ಐಎಫ್ ಫಂಡ್‌ನಲ್ಲಿ ಎಸ್‌ಎಚ್-45, ಚಳ್ಳಕೆರೆ ಅರಭಾವಿ ರಸ್ತೆಯ ದೊಣೆ ಹಳ್ಳಿಯಿಂದ ಜಗಳೂರು ಮಾರ್ಗ ಉದ್ದಗಟ್ಟ ಗೇಟ್‌ವರೆಗೆ ಒಟ್ಟು 6.65 ಕಿ.ಮೀ ದೂರದ ವ್ಯಾಪ್ತಿಯ ರಸ್ತೆ, ತಗ್ಗು, ಗುಂಡಿ ಮುಚ್ಚುವುದು, ಮರು ಡಾಂಬರೀಕರಣ ಕಾಮಗಾರಿ ನಡೆಯಲಿದೆ ಎಂದರು.
ಗ್ರಾ.ಪಂ. ಪಿಎಂಜಿವೈ ಯೋಜನೆಯಲ್ಲಿ 21 ಮನೆಗಳು ಮಂಜೂರಾಗಿದ್ದು ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪತ್ರಕರ್ತ ದೊಣೆಹಳ್ಳಿ ನಿರ್ಮಿಸಲಾಗಿದೆ. ಪಂ. ಅಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯ ಸುಧಾ, ಸಾವಿತ್ರಮ್ಮ, ರಾಮಣ್ಣ, ಮುಖಂಡ ಹೆಚ್.ಟಿ. ನಾಗರಾಜ್, ಬಿ. ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಚೌಡಮ್ಮ, ಗುತ್ತಿಗೆದಾರ ದೀಪಕ್ ಪಟೇಲ್ ಇದ್ದರು.