ಸವಿಡೈನ್ ಮಹೇಶ್ ಶೆಟ್ಟಿ ಗೆಳೆಯರ ಬಳಗ ಹಾಗೂ ರಿದ್ಧಿ – ಸಿದ್ಧಿ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿರುವ ವಿಜಯಕುಮಾರ್ ಕೋಡಿಯಲ್ ಬೈಲ್ ನಿರ್ದೇಶನದ ಕಾಂತಾರ ಕನ್ನಡ ಚಲನಚಿತ್ರ ಖ್ಯಾತಿಯ ಕಲಾಸಂಗಮದ ಕಲಾವಿದರಾದ ಸ್ವರಾಜ್ ಶೆಟ್ಟಿ ಅಭಿನಯಿಸಿರುವ `ಶಿವದೂತ ಗುಳಿಗ’ ಎಂಬ ವಿಭಿನ್ನ ಶೈಲಿಯ ಕನ್ನಡ ನಾಟಕ ಪ್ರದರ್ಶನವು ಇಂದು ಸಂಜೆ 6.30 ಕ್ಕೆ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಈ ನಾಟಕದ ಪ್ರದರ್ಶನವನ್ನು ತಲೆಸೀಮೆ ಎನ್ನುವ ಕಾಯಿಲೆಗೆ ತುತ್ತಾಗಿರುವ ಪುಷ್ಪ ಮತ್ತು ವಿಸ್ಮಯ ಎಂಬ ಎರಡು ಮಕ್ಕಳ ಚಿಕಿತ್ಸೆಯ ಸಹಾಯಾರ್ಥವಾಗಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ದುಡಾ ಅಧ್ಯಕ್ಷ ದಿನೇಶ್. ಕೆ. ಶೆಟ್ಟಿ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ, ಮಾಜಿ ಮೇಯರ್ ಎಸ್.ಟಿ. ವೀರೇಶ್, ರಾಜ್ಯ ಬಿಜೆಪಿ ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ರಿದ್ಧಿ – ಸಿದ್ಧಿ ಫೌಂಡೇಶನ್ ಅಧ್ಯಕ್ಷ ರಾಜು ಭಂಡಾರಿ ಅವರು ಭಾಗವಹಿಸಲಿದ್ದಾರೆ.
ಮಲ್ಲ್ಯಾಡಿ ಪ್ರಭಾಕರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆಂದು ಆಯೋಜಕರಾದ ಸವಿಡೈನ್ ಮಹೇಶ ಶೆಟ್ಟಿ, ಅನಿಲ್ ಗೌಡ, ಅಂಕಿತ ಮೊಯಿಲಿ, ಗಣೇಶಕಿರಣ ಮತ್ತು ಶ್ರೀಕಾಂತ್ ಬಗರೆ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 99459 77433.