ಶಾಂತಿ, ನೆಮ್ಮದಿಗೆ ಧಾರ್ಮಿಕ ಪ್ರವಚನಗಳು ಅವಶ್ಯ

ಶಾಂತಿ, ನೆಮ್ಮದಿಗೆ ಧಾರ್ಮಿಕ ಪ್ರವಚನಗಳು ಅವಶ್ಯ

ರಾಣೇಬೆನ್ನೂರು, ನ. 26 – ವಿಶ್ವ ಶಾಂ ತಿಯ ಕಲ್ಯಾಣಾರ್ಥ ವಾಗಿ ನಗರದ ಶನೇಶ್ವರ ಮಂದಿರ ದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಭಕ್ತರು ಭಾಗವಹಿಸುವುದರ ಮೂಲಕ ಈ ವರ್ಷದ ಶನೇಶ್ವರ ಜಾತ್ರೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀ ಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಕಳೆದ ಒಂದು ವಾರದಿಂದ ನಗರದ ಹೊರವಲಯದ ಹಿರೇಮಠದ ಶನೇಶ್ವರ ಸ್ವಾಮಿಯ ಮಂದಿರದಲ್ಲಿ ನಡೆಸುತ್ತಿರುವ  ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮಹೋತ್ಸವದ ನಿಮಿತ್ತ ವಿಶ್ವ ಶಾಂತಿ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಯ  ಪ್ರವಚನದ ನೇತೃತ್ವ ವಹಿಸಿ  ಮಾತನಾಡುತ್ತಿದ್ದರು.

ಆಧುನಿಕತೆಯ ಇಂದಿನ ದಿನಮಾನಗಳಲ್ಲಿ ಮನುಜನಿಗೆ ಆಸ್ತಿ, ಅಂತಸ್ತು, ಹಣ ಎಲ್ಲವೂ ಇದೆ. ಆದರೆ ಶಾಂತಿ, ನೆಮ್ಮದಿ, ಸಮಾಧಾನ, ಸಹನೆ ಮಾತ್ರ ಇಲ್ಲವಾಗಿವೆ. ಇವುಗಳನ್ನು ಪಡೆಯ ಬೇಕಾದರೆ ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ, ಗುರುಗಳ ಉಪದೇಶ, ಪ್ರವಚನಗಳನ್ನು ಆಲಿಸಬೇಕು ಎಂದು ಶ್ರೀಗಳು ಹೇಳಿದರು.

ಬೃಹನ್ಮಠ ನಿಚ್ವವ್ವನ ಹಳ್ಳಿಯ ಶಿವಯೋಗಿ ಹಾಲಸ್ವಾಮಿಗಳು ಮಾತನಾಡಿ  ಕಳೆದ 12 ವರ್ಷಗಳಿಂದ ಶನೇಶ್ವರ ಮಂದಿರದಲ್ಲಿ ಅನೇಕ ದಾಖಲೆಗಳಂತಹ ಕಾರ್ಯಕ್ರಮಗಳನ್ನು ಮಂದಿರದ ಶಿವಯೋಗಿ ಶ್ರೀಗಳು ಮುನ್ನಡೆಸುತ್ತಾ ಬಂದಿದ್ದು, ಈ ವರ್ಷ ನಡೆಯುವ ಶನೇಶ್ವರ ಸ್ವಾಮಿಯ ಜಾತ್ರೆ ಇತಿಹಾಸದ ಪುಟಗಳಲ್ಲಿ ಸೇರಲಿದೆ ಎಂದರು.

ಹಿರೇಕೆರೂರು ಶಾಸಕ ಯು.ಬಿ. ಬಣಕಾರ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣ, ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ, ಸಿದ್ದು ಚಿಕ್ಕಬಿದರಿ,  ನಗರ ಹಾಗೂ ಗ್ರಾಮೀಣ ಭಾಗದ ಭಕ್ತರು ಪಾಲ್ಗೊಂಡಿದ್ದರು.

error: Content is protected !!