ನಗರಕ್ಕೆ ಇಂದು ಯಡಿಯೂರಪ್ಪ

ನಗರಕ್ಕೆ ಇಂದು ಯಡಿಯೂರಪ್ಪ

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ 79ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮವು ಶಿರಮಗೊಂಡಹಳ್ಳಿ ರಸ್ತೆಯ  ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಇಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 8.30ಕ್ಕೆ ಬೆಂಗಳೂರಿನಿಂದ ಹೊರಡುವ ಯಡಿಯೂರಪ್ಪ ಅವರು, ಬೆಳಿಗ್ಗೆ 11.30ಕ್ಕೆ ನಗರವನ್ನು ತಲುಪುವರು. ಮಧ್ಯಾಹ್ನ 12 ಗಂಟೆಗೆ ಎಸ್.ಎ. ರವೀಂದ್ರನಾಥ್ ಅವರ ಶುಭಾಶಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸುವರು.

ರವೀಂದ್ರನಾಥ್ ಕಾರ್ಯಕ್ರಮ : ಎಸ್.ಎ. ರವೀಂದ್ರನಾಥ್ ಅವರು  ಇಂದು ಬೆಳಿಗ್ಗೆ 9 ಗಂಟೆಗೆ ಶಿರಮಗೊಂಡನಹಳ್ಳಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವರು. ಅಲ್ಲಿಂದ ಬೆಳಿಗ್ಗೆ 9.30ಕ್ಕೆ ಶಾಮನೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಬೆಳಿಗ್ಗೆ 10ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಅವರು, ಬೆಳಿಗ್ಗೆ 10.30ಕ್ಕೆ ಆವರಗೆರೆಯ ಗೋಶಾಲೆಗೆ ಭೇಟಿ ನೀಡುವರು. ಬೆಳಿಗ್ಗೆ 11ಕ್ಕೆ ನಿಟ್ಟುವಳ್ಳಿಯ ಶ್ರೀ ದುರ್ಗಾಂಬಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವರು. 

ನಂತರ ಬೆಳಿಗ್ಗೆ 11.30ಕ್ಕೆ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಅಭಿಮಾನಿಗಳು ಏರ್ಪಡಿಸಿರುವ ಶುಭಾಶಯ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರೊಂದಿಗೆ ರವೀಂದ್ರನಾಥ್ ಭಾಗವಹಿಸಲಿದ್ದಾರೆ.

error: Content is protected !!