ದಾವಣಗೆರೆ, ನ. 25- ನಿವೃತ್ತ ಪೊಲೀಸ್ ಮಹಾ ನಿರ್ದೇಶಕರೂ ಆಗಿರುವ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರು ಧಾರವಾಡಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಜಿಎಂಐಟಿ ಅತಿಥಿ ಗೃಹಕ್ಕೆ ಇಂದು ಭೇಟಿ ನೀಡಿದ್ದರು.
ಸಮಾಜದ ಮುಖಂಡರುಗಳಾದ ಕಂಚಿಕೆರೆ ಕೊಟ್ರೇಶ್, ಶ್ರೀಮತಿ ಶಶಿಕಲಾ ನಲ್ಕುದುರೆ, ರಶ್ಮಿ ನಾಗರಾಜ್ ಕುಂಕೋದ್, ಜಿಲ್ಲಾ ಕಾರ್ಯದರ್ಶಿ ನೀತು ನಂದೀಶ್ ಬಳ್ಳಾರಿ, ಕಾರ್ಯಕಾರಿಣಿ ದ್ರಾಕ್ಷಾ ಯಿಣಿ, ಪ್ರಧಾನ ಕಾರ್ಯದರ್ಶಿ ಹಾಲೇಶ್ ಕಾಯಿ ಪೇಟೆ, ವಿ. ಶಿವಮೂರ್ತಿ ಸ್ವಾಮಿ, ಜಯಣ್ಣಗೌಡರು, ಕೊಟ್ರೇಶ್, ಡೋಲಿ ಚಂದ್ರು, ಮಲ್ಲಿಕಾರ್ಜುನ್ ಅಂಗಡಿ, ಆರ್ಎಸ್ಎಸ್ ಜಯಕುಮಾರ್ ರೆಡ್ಡಿ, ಸಿ.ಎನ್.ಜಿ. ಪ್ರಕಾಶ್, ರೇವಣಪ್ಪ, ಕಿರಣ್, ಮಲ್ಲಿಕಾರ್ಜುನ್ ಕಟ್ಟಿಮನೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.