ಬಹುಭಾಷೆ ಕಲಿಯಿರಿ, ಕನ್ನಡ ಪೋಷಿಸಿರಿ: ಡಾ.ಗೀತಾ

ಬಹುಭಾಷೆ ಕಲಿಯಿರಿ, ಕನ್ನಡ ಪೋಷಿಸಿರಿ: ಡಾ.ಗೀತಾ

ದಾವಣಗೆರೆ, ನ.25- ಕಲಿಯುಗದ ಸ್ಪರ್ಧಾ ಪ್ರಪಂಚದಲ್ಲಿ ಬಹುಭಾಷೆ ಕಲಿಯಿರಿ, ಆದರೆ ನಮ್ಮ ಮಾತೃಭಾಷೆ ಕನ್ನಡವನ್ನು ಪೋಷಿಸಿರಿ ಎಂದು ಎ.ವಿ.ಕೆ.ಮಹಿಳಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಗೀತಾ ಬಸವರಾಜ್ ತಿಳಿಸಿದರು.

ನಗರದ ಬಾಪೂಜಿ ನರ್ಸಿಂಗ್ ಕಾಲೇಜ್ ಹಾಗೂ ಬಾಪೂಜಿ ನರ್ಸಿಂಗ್ ಶಾಲೆಯಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ನಾವು ನವೆಂಬರ್ ಕನ್ನಡಿಗರಾಗದೇ ನಂಬರ್ ಒನ್ ಕನ್ನಡಿಗರಾಗಬೇಕು ಎಂದು ಕಾಲೇಜಿನ ಕನ್ನಡ ಉಪನ್ಯಾಸಕ ಜೆಂಬಿಗಿ ಮೃತ್ಯುಂಜಯ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು, 

ಸಮಾರಂಭದಲ್ಲಿ ಬಾಪೂಜಿ ನರ್ಸಿಂಗ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನರ್ಮದಾ ಎ. ಮಾತನಾಡಿದರು, ಸಮಾರಂಭದ ಅಧ್ಯಕ್ಷತೆಯನ್ನು ಬಾಪೂಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಹರ್ಷ ಕೆ.ಎಂ. ವಹಿಸಿದ್ದರು

ಕು. ಕೀರ್ತಿ ಪ್ರಾರ್ಥಿಸಿದರು, ಕು. ಮಧು ಮಡಿವಾಳರ ಸ್ವಾಗತಿಸಿದರು. ಕು. ದೀಪ್ತಿ ಶಂ. ದೊಡ್ಡಮನಿ ಹಾಗೂ ದೀಪಿಕಾ ಎಂ.  ಕಾರ್ಯಕ್ರಮ ನಿರೂಪಿಸಿದರೆ ಕು. ಶಾಂತ ಮಡಿವಾಳರ ವಂದಿಸಿದರು.

error: Content is protected !!