ಶುಲ್ಕ ಹೆಚ್ಚಳ: ಸರ್ಕಾರದ ನಿರ್ಧಾರ ಖಂಡನೀಯ

ದಾವಣಗೆರೆ, ನ.25- ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿನ ಪಿಜಿ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎಐಡಿಎಸ್‌ಓ ಖಂಡಿಸಿದೆ.

ಖಾಸಗಿ ವೈದ್ಯಕೀಯ ಲಾಬಿಗೆ ಸಂಪೂರ್ಣವಾಗಿ ಶರಣಾಗಿರುವ ರಾಜ್ಯ ಸರ್ಕಾರ ಪ್ರತಿ ವರ್ಷ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದ ಶುಲ್ಕವನ್ನು ಏರಿಸುತ್ತಲೇ ಬಂದಿದೆ.

ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಶುಲ್ಕವನ್ನು 1 ಲಕ್ಷ ರೂ.ಗಳಷ್ಟು ಹೆಚ್ಚಿಸಿರುವುದು, ಸರ್ಕಾರದ ವ್ಯಾಪಾರಿ ಧೋರಣೆಯನ್ನು ತೋರಿಸುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ವೈದ್ಯಕೀಯ ಪಿಜಿ ವ್ಯಾಸಂಗ ಮತ್ತಷ್ಟು ದುಬಾರಿ ಆಗಿರುವುದನ್ನು ಎಐಡಿಎಸ್‌ಓ ರಾಜ್ಯ ಸಮಿತಿ ಖಂಡಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಟಿ.ಎಸ್‌. ಸುಮನ್‌ ತಿಳಿಸಿದ್ದಾರೆ.

error: Content is protected !!