ನಗರದಲ್ಲಿ ಇಂದು ಕನ್ನಡ ರಾಜ್ಯೋತ್ಸವ

ಎಸ್.ನಿಜಲಿಂಗಪ್ಪ ಬಡಾವಣೆ ಕ್ಷೇಮಾಭಿವೃದ್ಧಿ ಸಮಿತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು  ಸರ್ಕಾರಿ ನೌಕರರ ಭವನದಲ್ಲಿ ಇಂದು ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ್‌ ಕೆ.ಎಸ್‌. ವಹಿಸಲಿದ್ದು, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಕಾರ್ಯಕ್ರಮವನ್ನು ಉದ್ಘಾಟಿಸುವರು.

ಪ್ರಸ್ತಾವಿಕ ಶ್ರೀನಿವಾಸ್ ದಾಸಕರಿಯಪ್ಪ, ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಹೆಚ್‌.ಬಿ. ಮಂಜುನಾಥ್‌ ಅವರಿಂದ ಕನ್ನಡ ರಾಜ್ಯೋತ್ಸವ ಕುರಿತು ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಕೀಲುೂಳೆ ತಜ್ಞ ರಮೇಶ್‌ ಪೂಜಾರ್‌, ಸ್ತ್ರೀರೋಗ ತಜ್ಞ ಎಂ.ಎಸ್‌ ಹಿರೇಮಠ್‌ ಆಗಮಿಸುವರು. ಉಪಾಧ್ಯಕ್ಷರಾದ ಸುನೀಲ್‌ ಕುಮಾರ್‌ ಡಿ, ಆರ್‌.ಕೆ. ರುದ್ರಪ್ಪ, ಪ್ರದಾನ ಕಾರ್ಯದರ್ಶಿ ಸಿದ್ದಣ್ಣ ಡಿ.ಎಸ್‌., ಖಜಾಂಚಿ ರತ್ನಾಕರ್‌ ಆರ್‌.ವಿ. ಕಾರ್ಯದರ್ಶಿ ಸಾಗರ್‌ ಡಿ.ಎಸ್‌. ನಿರ್ದೇಶಕರುಗಳಾದ ಶ್ರೀನಿವಾಸ್‌ ದಾಸಕರಿಯಪ್ಪ, ಎ.ಜಿ.ವೀರೇಶ್‌, ತೀರ್ಥ ರಾಜ್‌ ಹೆಚ್‌.ಸಿ., ಕೆ.ಹೆಚ್‌. ಶೀಕರ, ಡಿ.ವಿ. ಜಯರುದ್ರಪ್ಪ, ಮೆಹಬೂಬ್‌ ಬಾಷಾ, ನಾರಾಯಣಸ್ವಾಮಿ ಎಂ.ಜಿ. ಉಪಸ್ಥಿತರಿರುವರು. ಕನ್ನಡಕ್ಕಾಗಿ ಹೋರಾಡಿದವರಿಗೆ ಸನ್ಮಾನ ಹಾಗೂ ಭಾರತೀ ವಾದ್ಯ ವೃಂದದವರಿಂದ ಮನೋರಂಜನೆ, ಬಡಾವಣೆ ಶಾಲಾ ಮಕ್ಕಳಿಂದ ನೃತ್ಯ ನಡೆಯಲಿದೆ.

error: Content is protected !!