ಕೊಕ್ಕನೂರಿನಲ್ಲಿ ಬೃಹತ್‌ ಆರೋಗ್ಯ ತಪಾಸಣೆ ಶಿಬಿರ

ಕೊಕ್ಕನೂರಿನಲ್ಲಿ ಬೃಹತ್‌ ಆರೋಗ್ಯ ತಪಾಸಣೆ ಶಿಬಿರ

ಮಲೇಬೆನ್ನೂರು, ನ.24- ಕೊಕ್ಕನೂರು ಗ್ರಾಮದ ಶ್ರೀ ಪವನದೇವ ಕಲ್ಯಾಣ ಮಂಟಪದಲ್ಲಿ   ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ ಹಾಗೂ ನಂದಿಗುಡಿ ಸಂಸ್ಥಾನ ಕೃಪಾಪೋಷಿತ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬೃಹತ್‌ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗೌರಮ್ಮ ಧರ್ಮರಾಜ್‌ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ದಾವಣಗೆರೆಯ ಲತಾ ನರ್ಸಿಂಗ್‌ ಹೋಮ್‌ನ ಡಾ. ಇ. ವಿರುಪಾಕ್ಷಪ್ಪ ಅವರು, ಹಳ್ಳಿ ಜನರು ತಮ್ಮ ನಿತ್ಯದ ಹೊಲ-ಮನೆ ಕೆಲಸದಲ್ಲಿ ತೊಡಗಿಕೊಂಡು ಆರೋಗ್ಯದ ಬಗ್ಗೆ ನಿಗಾ ವಹಿಸದೇ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಯಾವುದೇ ಸೂಚನೆ ಇಲ್ಲದೆ ಮಹಿಳೆಯರಲ್ಲಿ ಕೆಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಅವರು ಎಚ್ಚರ ವಹಿಸಬೇಕು. ಸಣ್ಣ ಸಮಸ್ಯೆ ಕಂಡು ಬಂದರೂ ವೈದ್ಯರ ಬಳಿ ತಪಾಸಣೆಗೆ ಹೋಗಿ ಎಂದು  ಕಳಕಳಿ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರಾದ ಕೆ.ಜಿ. ಶಾಂತರಾಜ್‌ ಮಾತನಾಡಿ, ವೃತ್ತಿ ನಿರತರು ತಮ್ಮ ಬಿಡುವಿನ ಸಮಯದಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿ ಈ ಆರೋಗ್ಯ ಶಿಬಿರ ಸಂಘಟಿಸಿದ್ದೇವೆ. ಮುಂದಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣ, ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ಜನಪರ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದರು.

ಡಾ. ಎನ್‌.ಆರ್‌.ದಿನೇಶ್‌ ಕುಮಾರ್ ಮಾತನಾಡಿದರು. ಮಲೇಬೆನ್ನೂರಿನ ಶ್ರೀ ನಂದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿಗಳಿಯ ಗೌಡ್ರು ಬಸವರಾಜಪ್ಪ, ಕುಕ್ಕುವಾಡದ ನಂದಿ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ. ರುದ್ರಗೌಡ, ಗ್ರಾಮದ ಮುಖಂಡರಾದ ಎಂ. ನಿಂಗನಗೌಡ, ಹನುಮಗೌಡ್ರು, ಧರ್ಮಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ಓ. ನಿಂಗನಗೌಡ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಅಭಿನಂದನ್‌ ಪಾಟೀಲ್‌, ಜಿಗಳಿ ಇಂದೂಧರ್‌, ಹಳ್ಳಿಹಾಳ್‌ ಹೆಚ್‌.ಟಿ. ಪರಮೇಶ್ವರಪ್ಪ, ಹೆಚ್‌. ವೀರನಗೌಡ, ಬಸವಾಪುರದ ಮಲ್ಲಯ್ಯ, ವಕೀಲ ನಂದಿತಾವರೆ ತಿಮ್ಮನಗೌಡ, ಕೆ.ಎನ್‌. ಹಳ್ಳಿಯ ಕೆ.ಹೆಚ್‌. ನಾಗನಗೌಡ, ರುದ್ರಗೌಡ, ಡಿಸಿಸಿ ಬ್ಯಾಂಕಿನ ಮಲೇಬೆನ್ನೂರು ಶಾಖೆ ಮ್ಯಾನೇಜರ್‌ ಹನುಮಗೌಡ, ಶಿಕ್ಷಕ ನಾಗರಾಜ್‌, ಆರೋಗ್ಯ ಇಲಾಖೆಯ ಬಿ.ಎಸ್‌. ಸುರೇಶ್‌, ಬೇವಿನಹಳ್ಳಿ ರಾಮನಗೌಡ ಮತ್ತಿತರರು ಭಾಗವಹಿಸಿದ್ದರು.

ಬಿಜೆಪಿ ಮುಖಂಡ ಚಂದ್ರಶೇಖರ್‌ ಪೂಜಾರ್‌ ಶಿಬಿರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. 

ಶಿಬಿರದಲ್ಲಿ ಹೆರಿಗೆ, ಸ್ತ್ರಿರೋಗ ತಜ್ಞ ಡಾ.  ಇ. ವಿರುಪಾಕ್ಷಪ್ಪ, ಕಣ್ಣಿನ ತಜ್ಞ ಡಾ. ಈಶ್ವರಪ್ಪ, ಮಕ್ಕಳ ತಜ್ಞ ಡಾ. ಎಂ.ಬಿ. ಬಸವಕುಮಾರ್‌, ಕೀಲು-ಮೂಳೆ ತಜ್ಞ ಡಾ. ಬಿ.ವಿ. ದೀಪಕ್‌, ಶಸ್ತ್ರ ಚಿಕಿತ್ಸೆ ತಜ್ಞ ಡಾ. ಕೆ.ಎನ್‌. ಪವನ್‌, ಫಿಜಿಷಿಯನ್‌ ಡಾ. ಎಸ್‌.ಎಸ್. ಸಾಹುಕಾರ್‌, ಮಕ್ಕಳ ಹೃದಯ ತಜ್ಞ ಡಾ. ಅರುಣ್‌ಕುಮಾರ್‌, ದಂತ ವೈದ್ಯರಾದ ಡಾ. ಉಷಾ ಮತ್ತು ಡಾ. ಮಂಜುನಾಥ್‌ ಪಾಟೀಲ್‌ ಪಾಲ್ಗೊಂಡಿದ್ದರು.

ನಯನ ಸಂಗಡಿಗರು ಪ್ರಾರ್ಥಿಸಿದರು. ಡಾ. ಎನ್‌.ಆರ್‌. ದಿನೇಶ್‌ಕುಮಾರ್‌ ಸ್ವಾಗತಿಸಿದರು. ಉಪನ್ಯಾಸಕ ಡಾ. ಬಿ.ಸಿ. ರಾಕೇಶ್‌ ನಿರೂಪಿಸಿದರೆ,  ಉಪನ್ಯಾಸಕ ಡಾ.ಅಶೋಕ್‌ಕುಮಾರ್ ಪಾಳೇದ್‌ ವಂದಿಸಿದರು.

error: Content is protected !!