ಹರಿಹರ, ನ. 24 – ನಗರದ ಗಾಂಧಿ ಮೈದಾನದಲ್ಲಿ ವಕೀಲರ ಸಂಘದ ವತಿಯಿಂದ ಮೂರನೇ ಬಾರಿಗೆ ಎರಡು ದಿನಗಳ ಕಾಲ ನಡೆಯುತ್ತಿರುವ ಅಂತರ ಜಿಲ್ಲಾ ಮಟ್ಟದ ಲೋ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ರಾಜೇಶ್ವರಿ ಹೆಗಡೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಎಂ. ಮಹಾವೀರ ಕರೆಣ್ಣವರ್, ಹರಿಹರ ಹಿರಿಯ ಸಿವಿಲ್ ನ್ಯಾಯಾಧೀಶ ಅಶೋಕ ಮುನ್ನೊಳ್ಳಿ, ಪ್ರಧಾನ ಸಿವಿಲ್ ಮತ್ತು ಎರಡನೇ ಹೆಚ್ಚುವರಿ ನ್ಯಾಯಾಧೀಶ ವೀಣಾ ಕೊಳೆಕಾರ್, ಒಂದನೇ ಹೆಚ್ಚುವರಿ ಸಿವಿಲ್ ಜೆ.ಎಂ.ಎಫ್.ಸಿ ನ್ಯಾಯಾ ಧೀಶ ಜ್ಯೋತಿ ಅಶೋಕ ಪತ್ತರ, ವಕೀಲರ ಸಂಘದ ಅಧ್ಯಕ್ಷ ಬಿ. ಆನಂದ್ ಕುಮಾರ್, ಮಾಜಿ ಅಧ್ಯಕ್ಷ ಪಿ. ರುದ್ರಗೌಡ್ರು, ಉಪಾಧ್ಯಕ್ಷೆ ಶುಭ, ಕಾರ್ಯದರ್ಶಿ ಕೆ.ವಿ. ನಾಗರಾಜ್, ಸಹ ಕಾರ್ಯದರ್ಶಿ ಬಿ.ಸಿ. ಪ್ರಕಾಶ್, ಕ್ರೀಡಾ ಆಯೋಜಕ ಸುರೇಶ್ ಕುಮಾರ್, ವೈ. ಉಮೇಶ್, ಹುಲ್ಮನಿ, ಬಿ.ಸಿ. ಪ್ರಕಾಶ್, ಎಸ್. ಬಾಲಾಜಿ, ಮಂಜುನಾಥ್, ತೀರ್ಪುಗಾರ ಮಲ್ಲೇಶ್ ಹಾಗೂ ಇತರರು ಹಾಜರಿದ್ದರು.