ಯಾಂತ್ರೀಕೃತ ನಾಟಿ ಪದ್ಧತಿಯಿಂದ ಉತ್ಪಾದನಾ ವೆಚ್ಚ ಕಡಿಮೆ

ಯಾಂತ್ರೀಕೃತ ನಾಟಿ ಪದ್ಧತಿಯಿಂದ ಉತ್ಪಾದನಾ ವೆಚ್ಚ ಕಡಿಮೆ

ದಾವಣಗೆರೆ, ನ.24- ಭತ್ತದ ಬೆಳೆಯಲ್ಲಿ ಯಾಂತ್ರೀಕೃತ ನಾಟಿ ಪದ್ಧತಿ ಹಾಗೂ ಪರ್ಯಾಯ ಹಸಿ ಮತ್ತು ಒಣಗಿಸುವ ಪದ್ಧತಿ ಅಳವಡಿಕೆಯಿಂದ ಕಡಿಮೆ ಉತ್ಪಾದನಾ ವೆಚ್ಚ ಹಾಗೂ ನೀರಿನ ಉಳಿತಾಯ ಮಾಡಬಹುದು ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್‌ ತಿಳಿಸಿದರು.

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಳೇಬಾತಿ ಗ್ರಾಮದಲ್ಲಿ ಯಾಂತ್ರೀಕೃತ ನಾಟಿ ಭತ್ತದ ಬೆಳೆಯಲ್ಲಿ ಪರ್ಯಾಯ ಹಸಿ ಮತ್ತು ಒಣಗಿಸುವ ಪದ್ಧತಿಯ ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

ಸಹಾಯಕ ಕೃಷಿ ನಿರ್ದೇಶಕ ಶ್ರೀಧರ್ ಮೂರ್ತಿ ಮಾತನಾಡಿ, ಭತ್ತವು ಪ್ರಮುಖ ಆಹಾರ ಬೆಳೆಯಾ ಗಿದ್ದು, ಕೃಷಿ ಇಲಾಖೆ ಒದಗಿಸುವ ಸೌಕರ್ಯ ಹಾಗೂ ವಿಜ್ಞಾನಿಗಳ ತಂತ್ರಜ್ಞಾನ ಬಳಸಿಕೊಂಡು, ಭತ್ತದ ಉತ್ಪಾದನೆ ಹೆಚ್ಚಸಿಕೊಳ್ಳಬೇಕೆಂದು ರೈತ ಕ್ಷೇತ್ರ ಪಾಠ ಶಾಲೆಯ ಮೂಲಕ ತಿಳಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕ ಶಂಕರ್ ಮೂರ್ತಿ ಮಾತನಾಡಿ, ಈ ವಿನೂತನ ಪದ್ಧತಿ ಅಳವಡಿಸಿಕೊಂಡರೆ 8ರಿಂದ 10 ಸಾವಿರ ರೂ.ಗಳ ಉಳಿತಾಯದ ಜತೆಗೆ ಶೇ.20ರಷ್ಟು ನೀರನ್ನೂ ಉಳಿತಾಯ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿದ್ದರು.

error: Content is protected !!