ಹರಿಹರ ತಾಲ್ಲೂಕಿನ ಸಾರಥಿ ಮತ್ತು ಉಕ್ಕಡಗಾತ್ರಿ ಗ್ರಾಮದಲ್ಲಿ ಇಂದು ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಗ್ರಾಮ ಪಂಚಾಯತಿ ಉಪ ಚುನಾವಣೆ ನಡೆಯಲಿದ್ದು, ಚುನಾವಣೆ ನಡೆಯುವ ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತದಾನದ ಡಬ್ಬಿಗಳು ಹಾಗೂ ದಾಖಲೆಗಳನ್ನು ತಹಶೀಲ್ದಾರ್ ಕಚೇರಿಯಿಂದ ಚುನಾವಣೆ ನಡೆಯುವ ಮತಗಟ್ಟೆ ಸ್ಥಳಕ್ಕೆ ತೆಗೆದುಕೊಂಡು ಹೋದರು.
ಈ ಸಂದರ್ಭದಲ್ಲಿ ಚುನಾವಣಾ ಶಾಖೆಯ ಶಿರಸ್ತೇದಾರ ಜಿ.ಪಿ ಅಶೋಕ ಕುಮಾರ್, ಸಹಾಯಕ ಅಧಿಕಾರಿಗಳಾದ ಎಂ. ಸೋಮಶೇಖರ್, ಪಿ.ಬಿ. ಉಮೇಶ್, ಚುನಾವಣಾ ಅಧಿಕಾರಿ ಡಿ.ಎಂ. ಮಂಜುನಾಥಯ್ಯ, ಸಹಾಯಕ ಎ. ರೀಯಾಜ್ ಆಹ್ಮದ್, ಈಶಪ್ಪ ಬೂದಿಹಾಳ, ಅಧೀಕ್ಷಾಧಿಕಾರಿ ವಿ. ರಾಜನಾಯ್ಕ್, ಫೈಯಾಜ್ ಆಹ್ಮದ್ ಇತರರು ಹಾಜರಿದ್ದರು.