ಈಶ್ವರಮ್ಮ ಶಾಲೆಯಲ್ಲಿ ಶ್ರೀ ಸತ್ಯಸಾಯಿ ಬಾಬಾರವರ 99ನೇ ಜನ್ಮದಿನೋತ್ಸವದ ಅಂಗ ವಾಗಿ ಇಂದು ಬೆಳಿಗ್ಗೆ 9ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಭಜನೆ, ಸ್ವಾಮಿಯ ದಿವ್ಯ ಸಂದೇಶಗಳು, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಲಿವೆ. ಈಶ್ವರಮ್ಮ ಶಾಲಾಡಳಿತದ ಖಜಾಂಚಿ ಶ್ರೀಮತಿ ಎ.ಪಿ. ಸುಜಾತ `ಜ್ಞಾನಮೂರ್ತಿ ಶ್ರೀ ಸತ್ಯಸಾಯಿ’ ದಿವ್ಯ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಕೆ.ಆರ್. ಸುಜಾತ ಕೃಷ್ಣ, ಶ್ರೀಮತಿ ಎ.ಆರ್. ಉಷಾ ರಂಗ ನಾಥ್, ಜಿ.ಆರ್. ವಿಜಯಾನಂದ್, ಬಸವರಾಜ್ ಬೆಳಗಾವಿ, ಡಾ|| ಶುಕ್ಲಾ ಶೆಟ್ಟಿ, ಶ್ರೀಮತಿ ಸುಜಾತಾ ಕೆ.ವಿ., ಕೆ.ಎಸ್. ಪ್ರಭುಕುಮಾರ್, ಶ್ರೀಮತಿ ಶಶಿರೇಖಾ ಜಿ.ಎಸ್. ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಸಂಚಾಲಕ ಪಾಂಡುರಂಗರಾವ್ ರೇವಣಕರ್ ಆಗಮಿಸುವರು.