ದಾವಣಗೆರೆ, ನ. 22- ಕನ್ನಡ ಮುಖ್ಯ ಬಾಗಿಲಾಗಬೇಕು. ಉಳಿದ ಭಾಷೆಗಳು ಕಿಟಕಿಗಳು ಮಾತ್ರ. ಕನ್ನಡ ನಮ್ಮ ತಾಯಿ ಇದ್ದಂತೆ ಉಳಿದ ಭಾಷೆಗಳು ಬಂಧುಗಳಿದ್ದಂತೆ. ಆದ್ದರಿಂದ ಕನ್ನಡ ಭಾಷೆಯನ್ನು ಆಡುವುದರ ಮೂಲಕ ಉಳಿಸಬೇಕಾಗಿದೆ ಎಂದು ತಾಲ್ಲೂಕು ಕ.ಸಾ.ಪ. ನಿರ್ದೇಶಕರಾದ ಶ್ರೀಮತಿ ಸೌಭಾಗ್ಯ ತಿಳಿಸಿದರು.
ನಗರದ ಮಾಂಟೆಸೊರಿ ಶಾಲೆಯಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಆಡಳಿತಾಧಿಕಾರಿ ಶ್ರೀಮತಿ ಮಲ್ಲಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಲೀಡ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಕಾರ್ತಿಕ್ ಶಾಲೆಯಲ್ಲಿ ಮುಂದಿನ ವರ್ಷ ಅಳವಡಿಸುವ ಹೊಸ ಶಿಕ್ಷಣ ಪದ್ಧತಿಯ ಬಗ್ಗೆ ವಿವರಿಸಿದರು. ಕೋ ಆರ್ಡಿನೇಟರ್ ಶ್ರೀಮತಿ ರಾಬಿಯಾ ಅವರು ಪೋಷಕರು ಮಕ್ಕಳ ಶಿಕ್ಷಣದ ಬಗೆಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ತಿಳಿಸಿದರು.
ವಿದ್ಯಾರ್ಥಿನಿ ರಶ್ಮಿ ಸ್ವಾಗತಿಸಿದರು. ಕು. ಕೀರ್ತನ ಕನಕದಾಸರ ಬಗ್ಗೆ ಮಾತನಾಡಿದರು. ಮುಖ್ಯೋಪಾಧ್ಯಾಯ ಮಹಮದ್ ಫರ್ಹಾನ್ ವಂದಿಸಿದರು.