ಕೃಷಿ ಚಟುವಟಿಕೆಗೆ ತಂತ್ರಜ್ಞಾನದ ಪೂರಕ ಸಂಶೋಧನೆ ಅಗತ್ಯ

ಕೃಷಿ ಚಟುವಟಿಕೆಗೆ ತಂತ್ರಜ್ಞಾನದ ಪೂರಕ ಸಂಶೋಧನೆ ಅಗತ್ಯ

ಜಿಎಂವಿವಿ ನಾವೀನ್ಯತೆ ಮಂಡಳಿ ಸಭೆಯಲ್ಲಿ ಡಾ. ಶಶಿಧರ್ ಸಲಹೆ  

ದಾವಣಗೆರೆ, ನ.21- ಪ್ರಸ್ತುತ ರೈತರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ನಾವೀನ್ಯ ತಂತ್ರಜ್ಞಾನದ ಮುಖೇನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪೂರಕವಾದ ಸಂಶೋಧ ನೆಗಳನ್ನು ನಡೆಸುವಲ್ಲಿ ಹೆಚ್ಚಿನ  ಗಮನ ಹರಿಸಬೇಕಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ. ಟಿ.ಆರ್. ಶಶಿಧರ್  ತಿಳಿಸಿದರು.

ನಗರದ  ಜಿಎಂ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆ ಮತ್ತು ನಾವೀನ್ಯತಾ ಮಂಡಳಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

ಕೃಷಿ ಕ್ಷೇತ್ರ ಬಹಳ ಮಹತ್ವದ್ದಾಗಿದ್ದು, ಇತ್ತೀಚಿಗೆ ಕೂಲಿ ಕಾರ್ಮಿಕರು ಸಿಗುವುದೇ ಕಷ್ಟಕರವಾಗಿದ್ದು, ಹೆಚ್ಚಾಗಿ ಯಂತ್ರೋಪಕರಣಗಳ ಬಳಕೆ ಕಾಣಲಾಗುತ್ತಿದೆ. ಈ ಕ್ಷೇತ್ರದಲ್ಲಿ ಭೂಮಿ ಫಲವತ್ತತೆ ಮತ್ತು ಮಣ್ಣು ಪರೀಕ್ಷೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿದು ಅವುಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ನಾವೀನ್ಯ ತಂತ್ರಜ್ಞಾನ, ಯಂತ್ರೋ ಪಕರಣಗಳ ಬಳಕೆ ಮುಖೇನ ಸುಲಭೋಪಾಯದ ದಾರಿಗಾಗಿ ನಾವೀನ್ಯ ಸಂಶೋಧನಾತ್ಮಕ ಯೋಜನೆಗಳನ್ನು ರೂಪಿಸುವಂತೆ  ಅವರು ಸಲಹೆ ನೀಡಿದರು.

ದಾವಣಗೆರೆ ವಿವಿ ಗಣಿತಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಪ್ರಸನ್ನಕುಮಾರ್ ಮಾತನಾಡಿ, ಸಣ್ಣ ಮೊತ್ತದ ಸಂಶೋಧನೆಗಳ ಪ್ರಾರಂಭದ ಯೋಜನೆಗಳನ್ನು ಡಾಲರ್ ಹಂತದಲ್ಲಿ ಸಂಶೋಧನೆಗಳನ್ನು ಬೆಂಬಲಿಸಬೇಕು ಮತ್ತು ಆ ಹಂತದ ಸಂಶೋಧನೆಗಳಿಗೆ ಸಿಗುವ ಬೇಡಿಕೆ, ಅವುಗಳಿಂದ ಆಗುವ ಅನುಕೂಲತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು. ಡೀನ್ ಡಾ. ಕೆ.ಎನ್. ಭರತ್ ಸಂಶೋಧನೆ ಮತ್ತು ನಾವೀನ್ಯತಾ ವಿಭಾಗದ ಯೋಜನೆ ಮತ್ತು ಕಾರ್ಯಗಳ ಕುರಿತು ವಿವರಣೆ ನೀಡುತ್ತಾ, ಹಿಂದಿನ ಸಭೆಯಲ್ಲಿ ನೀಡಿದ ಸಲಹೆಗಳಿಗೆ ಪೂರಕವಾಗಿ ಅನುಷ್ಠಾನಗೊಂಡ ಕಾರ್ಯಕ್ರಮಗಳನ್ನು  ವಿವರಿಸಿ,  ಜಿಎಂ ವಿಶ್ವವಿದ್ಯಾ ನಿಲಯವು 2023-24ರ ಶೈಕ್ಷಣಿಕ ವರ್ಷದಿಂದ ಪಿಹೆಚ್ ಡಿ ಕಾರ್ಯಕ್ರಮಕ್ಕೆ ಪ್ರವೇಶವನ್ನು ಪ್ರಾರಂಭಿಸಿದೆ ಎಂದು  ತಿಳಿಸಿದರು.

ಆನ್ ಲೈನ್ ಸಂಪರ್ಕ ಮುಖೇನ ಬೆಳಗಾವಿ ಘಾಟ್ಗೆ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ. ವಿಜಯ್ ಪುರೋಹಿತ್ ಭಾಗವಹಿಸಿದ್ದರು.

ಸಭೆಯಲ್ಲಿ ಜಿಎಂ ವಿವಿ  ಕುಲಪತಿ  ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ,  ಕುಲಸಚಿವ  ಡಾ. ಬಿ.ಎಸ್. ಸುನಿಲ್ ಕುಮಾರ್, ಸೀನಿ ಯರ್ ಡೀನ್ ಡಾ. ಕೆ. ಕರಿಬಸಪ್ಪ, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಸಂಜಯ್ ಪಾಂಡೆ, ಎಫ್ ಬಿಎಎಸ್ ವಿಭಾಗದ ಡೀನ್ ಡಾ. ಬಿ.ಎಂ. ಸಂತೋಷ್, ಫ್ಯಾಕಲ್ಟಿ ಆಫ್ ಕಂಪ್ಯೂಟಿಂಗ್ ಅಂಡ್ ಐಟಿ ವಿಭಾಗದ ಡೀನ್ ಡಾ. ಶ್ವೇತಾ ಮರೀಗೌಡರ್, ಜಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ  ಡಾ. ಗಿರೀಶ್ ಬೋಳಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!