ಜಿಎಂಐಟಿಯಲ್ಲಿ ಇಂದು ಪದವಿ ಪ್ರದಾನ

ದಾವಣಗೆರೆ, ನ.22- ಇಲ್ಲಿನ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಜಿ.ಎಂ ಹಾಲಮ್ಮ ಸಭಾಂಗಣದಲ್ಲಿ ನಾಳೆ ದಿನಾಂಕ 23ರ ಶನಿವಾರ ಬೆಳಗ್ಗೆ 10.30ಕ್ಕೆ 19 ಮತ್ತು 20ನೇ ಪದವಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ವಿವಿಯ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್‌ ಪಾಂಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022-23 ಹಾಗೂ 2023-24ನೇ ಸಾಲಿನ ಒಟ್ಟು 15 ವಿಭಾಗಗಳ 1061 ವಿದ್ಯಾರ್ಥಿಗಳಿಗೆ ಪ್ರದವಿ ಪ್ರದಾನ ಮಾಡಲಿದ್ದು, ಇದರಲ್ಲಿ 6 ಜನ ಪಿಎಚ್‌ಡಿ ವಿದ್ಯಾರ್ಥಿಗಳಿಗೂ ಪದವಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಬೆಳಗ್ಗೆ 10.30ಕ್ಕೆ 19ನೇ ಪದವಿ ಪ್ರದಾನ ಸಮಾ ರಂಭವಿದ್ದು, 7 ವಿಭಾಗಗಳಿಂದ 2022-23ನೇ ಸಾಲಿನ ಒಟ್ಟು 495 ವಿದ್ಯಾರ್ಥಿಗಳಿಗೆ ಜಿ.ಎಂ. ವಿವಿಯ ಕುಲಪತಿ ಎಸ್.ಆರ್. ಶಂಕಪಾಲ್ ಪದವಿ ಪ್ರದಾನ ಮಾಡುವರು. ಶ್ರೀಶೈಲ ಎಜುಕೇಶನ್ ಟ್ರಸ್ಟಿ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್, ಆಡಳಿತ ಮಂಡಳಿ ಸದಸ್ಯ ಡಾ.ಕೆ. ದಿವ್ಯಾನಂದ, ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2.30ಕ್ಕೆ 20ನೇ ಪದವಿ ಪ್ರದಾನ ಸಮಾರಂಭ ಜರುಗಲಿದ್ದು, 2023-24ನೇ ಸಾಲಿನ ಒಟ್ಟು 8 ವಿಭಾಗಗಳಿಂದ 566 ವಿದ್ಯಾರ್ಥಿಗಳಿಗೆ ಸಹ ಕುಲಪತಿ ಡಾ.ಎಚ್.ಡಿ. ಮಹೇಶಪ್ಪ ಪದವಿ ಪ್ರದಾನ ಮಾಡಲಿದ್ದಾರೆ.

ಜಿಎಂ ವಿವಿಯ ಕುಲಾಧಿಪತಿ ಜಿ.ಎಂ. ಲಿಂಗರಾಜು, ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ, ಆಡಳಿತ ಮಂಡಳಿ ಸದಸ್ಯ ಡಾ. ಕೆ. ದಿವ್ಯಾನಂದ ಭಾಗವಹಿಸಲಿದ್ದಾರೆ.

ಈ ವೇಳೆ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಸ್. ಓಂಕಾರಪ್ಪ, ಎಂಬಿಎ ವಿಭಾಗದ ಮುಖ್ಯಸ್ಥ ಪಿ.ಎಸ್. ಬಸವರಾಜು, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಭರತರಾಜ್ ಇಟಗಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಬಿ.ಎನ್. ವೀರಪ್ಪ ಹಾಗೂ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಜೆ. ಪ್ರವೀಣ್, ಪಿಆರ್‌ಒ ವಸಂತ್‌ ಇದ್ದರು.

error: Content is protected !!