ಅಂಬಿಕಾ ಬಡಾವಣೆಯ ನಕ್ಷೆ ರದ್ದು ದೂಡಾ ನಿರ್ಧಾರಕ್ಕೆ ಸ್ವಾಗತ

ಅಂಬಿಕಾ ಬಡಾವಣೆಯ ನಕ್ಷೆ ರದ್ದು   ದೂಡಾ ನಿರ್ಧಾರಕ್ಕೆ ಸ್ವಾಗತ

ದಾವಣಗೆರೆ, ನ. 20- ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ನಗರದ ಅಂಬಿಕಾ ಬಡಾವಣೆಯ ನಕ್ಷೆಯನ್ನು ರದ್ದುಪಡಿಸಿರುವ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಸ್ವಾಗತಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂಬಿಕಾ ಬಡಾವಣೆಯಂತಹ ಅನೇಕ ಬಡಾವಣೆಗಳು ನಿಯಮಗಳನ್ನು ಉಲ್ಲಂಘಿಸಿದ್ದು, ಅಂತಹ ಬಡಾವಣೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಂಬಿಕಾ ಬಡಾವಣೆ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರೂ ದೂಡಾ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ನೂತನ ದೂಡಾ ಅಧ್ಯಕ್ಷರಾಗಿ ದಿನೇಶ್ ಕೆ. ಶೆಟ್ಟಿ ಅವರು ಆ ಬಡಾವಣೆ ಬಗ್ಗೆ ಕೈಗೊಂಡಿರುವ ದಿಟ್ಟ ನಿರ್ಧಾರವನ್ನು ನಾಗರಾಜ್ ಸ್ವಾಗತಿಸಿ, ಶ್ಲ್ಯಾಘಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿರುವ ಅನೇಕ ಬಡಾವಣೆಗಳು ದೂಡಾ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿದ್ದು, ಅಂತಹ ಬಡಾವಣೆಗಳ ಬಗ್ಗೆಯೂ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸುವುದರ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

error: Content is protected !!