ಹರಿಹರ, ನ.20- ನಗರದಲ್ಲಿ ಬರುವ ಮಾರ್ಚ್ ತಿಂಗಳಲ್ಲಿ ನಡೆಯವ ಗ್ರಾಮದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಾದ್ಯಂತ ಸಂಚರಿಸಿದ ಡಬ್ಬಿ ಗಡಿಗೆಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಯಿತು.
ಮೊದಲ ಡಬ್ಬಿ ಗೆರೆಯಲ್ಲಿ 3 ಲಕ್ಷದ 38 ಸಾವಿರದ 140 ರೂಪಾಯಿ ಸಂಗ್ರಹವಾಗಿದೆ ಎಂದು ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ ಮತ್ತು ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಉತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ್ ಹಾರ್ನಳ್ಳಿ, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಖಜಾಂಚಿ ಕೆಂಚಪ್ಪ ದೊಡ್ಡಮನಿ, ಸಹ ಕಾರ್ಯದರ್ಶಿ ಸಿದ್ದಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎಸ್.ಎಂ. ವಸಂತ್, ಟಿ.ಜೆ. ಮುರುಗೇಶಪ್ಪ, ಜಿ.ನಂಜಪ್ಪ, ಕೆ.ಬಿ. ರಾಜಶೇಖರ್, ಗೌಡ್ರು ಪುಟ್ಟಪ್ಪ, ಬಸವರಾಜ್ ಪಟೇಲ್, ಎಂ. ಚಿದಾನಂದ ಕಂಚಿಕೇರಿ ಇತರರು ಹಾಜರಿದ್ದರು.